Publish Date: Fri, 17 Jun 2022 (11:00 IST)
Updated Date: Fri, 17 Jun 2022 (11:07 IST)
ರಾಜ್ ಕೋಟ್: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಇಂದು ನಡೆಯಲಿದ್ದು, ಮಳೆ ಭೀತಿ ಶುರುವಾಗಿದೆ.
ಹವಾಮಾನ ವರದಿ ಪ್ರಕಾರ ನಾಲ್ಕನೇ ಪಂದ್ಯಕ್ಕೆ ಸಣ್ಣ ಮಟ್ಟಿನ ಮಳೆಯಾಗುವ ಸಾಧ‍್ಯತೆಯಿದೆ. ನಿನ್ನೆ ಇಲ್ಲಿ ಮಳೆಯಾಗಿತ್ತು. ಹೀಗಾಗಿ ಇಂದೂ ಮಳೆಯಾಗುವ ಸಾಧ್ಯತೆಯಿದೆ.
ಒಂದು ಮಳೆ ಬಂದು ಪಂದ್ಯ ರದ್ದಾದರೆ ಟೀಂ ಇಂಡಿಯಾಕ್ಕೆ ದೊಡ್ಡ ನಷ್ಟವಾಗಲಿದೆ. ಒಂದು ವೇಳೆ ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯ ಸೋತರೆ ಟೀಂ ಇಂಡಿಯಾ ಸರಣಿ ಕಳೆದುಕೊಳ್ಳಲಿದೆ. ಒಂದು ವೇಳೆ ಅಂತಿಮ ಪಂದ್ಯ ಗೆದ್ದರೆ ಸರಣಿ ಸಮಬಲವಾಗಲಿದೆ. ಹೀಗಾಗಿ ಈ ಪಂದ್ಯ ನಡೆಯುವುದು ಟೀಂ ಇಂಡಿಯಾ ಪಾಲಿಗೆ ಮುಖ್ಯವಾಗಲಿದೆ.