Select Your Language

Notifications

webdunia
webdunia
webdunia
webdunia

ಗಾಯಗೊಂಡಿರುವ ಕೆಎಲ್ ರಾಹುಲ್ ಜರ್ಮನಿಗೆ!

ಗಾಯಗೊಂಡಿರುವ ಕೆಎಲ್ ರಾಹುಲ್ ಜರ್ಮನಿಗೆ!
ಮುಂಬೈ , ಗುರುವಾರ, 16 ಜೂನ್ 2022 (16:02 IST)
ಮುಂಬೈ: ಗಾಯದ ಸಮಸ್ಯೆಯಿಂದಾಗಿ ಕಳೆದ ನಾಲ್ಕು ಸರಣಿಗಳಲ್ಲಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಈಗ ಇಂಗ್ಲೆಂಡ್ ಸರಣಿಯಿಂದಲೂ ಹೊರಬಿದ್ದಿದ್ದಾರೆ.

ತೊಡೆ ಸಂದು ನೋವಿನಿಂದಾಗಿ ರಾಹುಲ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಮೊದಲು ತಂಡದಿಂದ ಹೊರನಡೆದಿದ್ದರು. ಇದಕ್ಕೆ ಮೊದಲು ಐಪಿಎಲ್ ಆಡಿದ್ದರು. ಆದರೆ ಅದಕ್ಕೂ ಮೊದಲು ಎರಡು ಸರಣಿಗಳಲ್ಲಿ ಭಾರತದ ಪರ ಆಡಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಅವರು ಇತ್ತೀಚೆಗೆ ತೀವ್ರ ಟೀಕೆಗೊಳಗಾಗಿದ್ದರು.

ಇದೀಗ ಅವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಬಿಸಿಸಿಐ ಜರ್ಮನಿಗೆ ಕಳುಹಿಸಿಕೊಡಲಿದೆ. ಇಷ್ಟು ದಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಹುಲ್ ಫಿಟ್ನೆಸ್ ತೃಪ್ತಿದಾಯಕವಾಗಿರಲಿಲ್ಲ. ಹೀಗಾಗಿ ಸದ್ಯಕ್ಕೆ ಅವರು ಜರ್ಮನಿಗೆ ತೆರಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಟೀಂ ಇಂಡಿಯಾ ಕ್ರಿಕೆಟಿಗರು