Publish Date: Thu, 16 Jun 2022 (10:00 IST)
Updated Date: Thu, 16 Jun 2022 (10:14 IST)
ಮುಂಬೈ: ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು ಐಪಿಎಲ್ ನಲ್ಲಿ ಮಿಂಚಿದ್ದ ಹಲವರಿಗೆ ಅವಕಾಶ ಸಿಕ್ಕಿದೆ. ಆದರೆ ರಾಹುಲ್ ತೆವಾತಿಯಾರನ್ನು ಕಡೆಗಣಿಸಲಾಗಿದೆ.
ಇದು ಯುವ ಆಟಗಾರನ ಬೇಸರಕ್ಕೆ ಕಾರಣವಾಗಿದೆ. ರಾಹುಲ್ ತಮ್ಮ ಬೇಸರವನ್ನು ಟ್ವೀಟ್ ಮೂಲಕ ಹೊರಹಾಕಿದ್ದಾರೆ. ನಿರೀಕ್ಷೆಗಳು ಯಾವತ್ತೂ ನೋವು ಕೊಡುತ್ತವೆ ಎಂದು ರಾಹುಲ್ ಮಾಡಿರುವ ಟ್ವೀಟ್ ಈಗ ಎಲ್ಲರ ಗಮನಸೆಳೆಯುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಸಾಂತ್ವನ ನೀಡಿದ್ದಲ್ಲದೆ, ಸದ್ಯದಲ್ಲೇ ಅವಕಾಶ ಸಿಗಬಹುದು ಎಂದು ಹಾರೈಸಿದ್ದಾರೆ.