ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಹೆಮ್ಮೆಯ ಜ್ಯಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ತಮ್ಮದೇ ದಾಖಲೆ ಮುರಿದಿದ್ದಾರೆ.
ಪಾವೋ ನೂರ್ಮಿ ಗೇಮ್ಸ್ 2022 ರಲ್ಲಿ ನೀರಜ್ ಚೋಪ್ರಾ 89.30 ಮೀ. ದೂರ ಎಸೆದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮಾಡಿದ್ದ ದಾಖಲೆಯನ್ನು ಮೀರಿದ್ದಾರೆ. ಟೋಕಿಯೋದಲ್ಲಿ ನೀರಜ್ 87.50 ಮೀ. ದೂರ ಎಸೆದು ದಾಖಲೆ ಮಾಡಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
90 ಮೀ. ದೂರ ಎಸೆಯುವುದೇ ನನ್ನ ಮುಂದಿನ ಗುರಿ ಎಂದು ನೀರಜ್ ಈ ಹಿಂದೆ ಹೇಳಿಕೊಂಡಿದ್ದರು. ಅದೇ ಹಾದಿಯಲ್ಲಿ ನೀರಜ್ ಈಗ ಸಾಗಿದ್ದಾರೆ ಎನ್ನುವುದು ಈ ಸಾಧನೆಯಿಂದ ತಿಳಿದುಬರುತ್ತದೆ.