Select Your Language

Notifications

webdunia
webdunia
webdunia
webdunia

ಕಟಕ್ ನಲ್ಲಿ ಸೋಲಿಗೆ ಕಾರಣ ನೀಡಿದ ರಿಷಬ್ ಪಂತ್

ಕಟಕ್ ನಲ್ಲಿ ಸೋಲಿಗೆ ಕಾರಣ ನೀಡಿದ ರಿಷಬ್ ಪಂತ್
ಕಟಕ್ , ಸೋಮವಾರ, 13 ಜೂನ್ 2022 (08:20 IST)
ಕಟಕ್: ದ.ಆಫ್ರಿಕಾ ವಿರುದ್ಧ ದ್ವಿತೀಯ ಟಿ20 ಪಂದ್ಯವನ್ನು 4 ವಿಕೆಟ್ ಗಳಿಂದ ಸೋತ ಬಳಿಕ ನಾಯಕ ರಿಷಬ್ ಪಂತ್ ಸೋಲಿಗೆ ಎರಡು ಪ್ರಮುಖ ಕಾರಣಗಳನ್ನು ನೀಡಿದ್ದಾರೆ.

ಭಾರತ ನೀಡಿದ್ದ 149 ರನ್ ಗಳ ಸುಲಭ ಗುರಿ ಬೆನ್ನತ್ತಿದ ಆಫ್ರಿಕಾ 18.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್ ಗಳ ಗುರಿ ತಲುಪಿತು. ಆಫ್ರಿಕಾ ಪರ ಕ್ಲಾಸೆನ್ 81 ರನ್ ಗಳ ಇನಿಂಗ್ಸ್ ಆಡಿದರು. ತೆಂಬಾ ಬವುಮಾ 35 ರನ್ ಗಳ ಕೊಡುಗೆ ನೀಡಿದರು.

ಈ ಸೋಲಿನ ಬಳಿಕ ಮಾತನಾಡಿದ ರಿಷಬ್ ಪಂತ್ ‘ನಾವು 10-15 ರನ್ ಕೊರತೆ ಅನುಭವಿಸಿದೆವು. ಅಲ್ಲದೆ ಭುವನೇಶ್ವರ್ ಕುಮಾರ್ ಸೇರಿದಂತೆ ಬೌಲರ್ ಗಳು ಆರಂಭದ 7-8 ಓವರ್ ಉತ್ತಮ ದಾಳಿ ಸಂಘಟಿಸಿದ್ದರು. ಅದಾದ ಬಳಿಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಸೋಲಬೇಕಾಯಿತು’ ಎಂದಿದ್ದಾರೆ. ಈ ಸೋಲಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 0-2 ರಿಂದ ಹಿನ್ನಡೆ ಅನುಭವಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಮೊನ್ನೆ ಬೌಲಿಂಗ್, ಇಂದು ಬ್ಯಾಟಿಂಗ್: ಟೀಂ ಇಂಡಿಯಾಗೆ ತಪ್ಪದ ಸಂಕಷ್ಟ