Publish Date: Sun, 12 Jun 2022 (08:00 IST)
Updated Date: Sun, 12 Jun 2022 (08:22 IST)
ಕಟಕ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯ ಇಂದು ಕಟಕ್ ನಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಕೆಲವು ಬದಲಾವಣೆ ಮಾಡುವ ಸಾಧ‍್ಯತೆಯಿದೆ.
ಕಳೆದ ಪಂದ್ಯದಲ್ಲಿ ಭಾರತ ಬೌಲಿಂಗ್ ನಿಂದಾಗಿ ಸೋಲು ಅನುಭವಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಬದಲಾವಣೆಯಾಗುವ ಸಾಧ‍್ಯತೆಯಿದೆ.
ಐಪಿಎಲ್ ನಲ್ಲಿ ಮಿಂಚಿದ್ದ ವೇಗಿ ಉಮ್ರಾನ್ ಮಲಿಕ್ ಗೆ ಸ್ಥಾನ ಸಿಗುವ ಸಾಧ‍್ಯತೆಯಿದ್ದು, ಅವರಿಗಾಗಿ ಆವೇಶ್ ಖಾನ್ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಯಜುವೇಂದ್ರ ಚಾಹಲ್ ಗೆ ಮತ್ತೊಂದು ಅವಕಾಶ ಸಿಗುವ ಸಾಧ‍್ಯತೆಯಿದೆ. ಉಳಿದಂತೆ ಬ್ಯಾಟಿಂಗ್ ನಲ್ಲಿ ಬದಲಾವಣೆಯಾಗುವ ಸಾಧ‍್ಯತೆಯಿಲ್ಲ.