ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಮಾಲ್ಡೀವ್ಸ್ ನಲ್ಲಿ ರಜೆ ಮುಗಿಸಿ ತವರಿಗೆ ಬಂದ ತಕ್ಷಣ ನೇರವಾಗಿ ಮುಂಬೈನ ಆಸ್ಪತ್ರೆಯೊಂದಕ್ಕೆ ತೆರಳಿದ್ದಾರೆ.
ಇದರ ಬೆನ್ನಲ್ಲೇ ನೆಟ್ಟಿಗರು ದಂಪತಿ ಎರಡನೇ ಮಗುವಿಗೆ ಪ್ಲ್ಯಾನ್ ಮಾಡುತ್ತಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅವರು ಯಾವ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನೆಟ್ಟಿಗರಂತೂ ಸ್ಟಾರ್ ದಂಪತಿಯ ಎರಡನೇ ಮಗುವಿನ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ.
ಇನ್ನು ತವರಿಗೆ ಬರುತ್ತಿದ್ದಂತೇ ವಮಿಕಾ ತಂದೆ-ತಾಯಿಯನ್ನು ಸ್ವತಃ ಏರ್ ಪೋರ್ಟ್ ನಲ್ಲಿ ಸ್ವೀಕರಿಸಿದ್ದಾಳೆ.