Publish Date: Wed, 15 Jun 2022 (08:50 IST)
Updated Date: Wed, 15 Jun 2022 (09:23 IST)
ಮುಂಬೈ: ಪತ್ನಿ ಅನುಷ್ಕಾ ಶರ್ಮಾ ಜೊತೆ ರಿಲ್ಯಾಕ್ಸ್ ಆಗಲು ಮಾಲ್ಡೀವ್ಸ್ ಹೋಗಿದ್ದ ವಿರಾಟ್ ಕೊಹ್ಲಿ ತವರಿಗೆ ವಾಪಸ್ ಆಗಿದ್ದಾರೆ.
ವಿಶೇಷವೆಂದರೆ ಈ ಪ್ರವಾಸದಲ್ಲಿ ವಿರಾಟ್ ದಂಪತಿ ಪುತ್ರಿ ವಮಿಕಾಳನ್ನು ಕರೆದೊಯ್ದಿರಲಿಲ್ಲ. ಇದೀಗ ವಮಿಕಾ ನಾಲ್ಕು ದಿನಗಳ ನಂತರ ತನ್ನ ತಂದೆ-ತಾಯಿಯನ್ನು ರಿಸೀವ್ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ.
ಈ ವೇಳೆ ಫೋಟೋಗ್ರಾಫರ್ ಗಳು ಆಕೆಯ ಫೋಟೋ ಸೆರೆಹಿಡಿಯಲು ಮುಂದಾದಾಗ ವಿರಾಟ್ ದಂಪತಿ ಫೋಟೋ ತೆಗೆಯದಂತೆ ಮನವಿ ಮಾಡಿದ್ದಾರೆ.