Select Your Language

Notifications

webdunia
webdunia
webdunia
webdunia

27ನೇ ಶತಕ ಸಿಡಿಸಿ ಸ್ಮಿತ್, ಕೊಹ್ಲಿ ದಾಖಲೆ ಸರಿಗಟ್ಟಿದ ರೂಟ್!

century joe root test ಟೆಸ್ಟ್ ಜೋ ರೂಟ್ ಶತಕ ವಿರಾಟ್ ಕೊಹ್ಲಿ
bengaluru , ಸೋಮವಾರ, 13 ಜೂನ್ 2022 (14:17 IST)

ಇಂಗ್ಲೆಂಡ್ ತಂಡದ ರನ್ ಮೆಷಿನ್ ಜೋ ರೂಟ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 27 ಶತಕ ಸಿಡಿಸಿದ ಭಾರತದ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಜೊತೆ ಸ್ಥಾನ ಹಂಚಿಕೊಂಡರು.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಇತ್ತೀಚೆಗಷ್ಟೇ 10 ಸಾವಿರ ರನ್ ಪೂರೈಸಿದ ವಿಶ್ವದ 14ನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರು. ಇದರ ಬೆನ್ನಲ್ಲೇ ಮತ್ತೊಂದು ದಾಖಲೆ ಬರೆದು ಭರ್ಜರಿ ಫಾರ್ಮ್ ಮುಂದುವರಿಸಿರುವುದನ್ನು ಸಾಬೀತುಪಡಿಸಿದರು.

ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ರೂಟ್, 116 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 27ನೇ ಶತಕ ಗಳಿಸಿದರು. ಅಲ್ಲದೇ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಪಾಕಿಸ್ತಾನದ ಯೂನಿಸ್ ಖಾನ್ ಮತ್ತು ಭಾರತದ ಸುನೀಲ್ ಗವಾಸ್ಕರ್ ದಾಖಲೆಯನ್ನು ಹಿಂದಿಕ್ಕಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬೀಚ್ ನಲ್ಲಿ ಕಿಂಗ್ ಕೊಹ್ಲಿ ಅರೆನಗ್ನ ಪೋಸ್: ಹಾಟ್ ಎಂದ ಫ್ಯಾನ್ಸ್