Select Your Language

Notifications

webdunia
webdunia
webdunia
webdunia

23 ವರ್ಷಗಳ ಬಳಿಕ ರಣಜಿ ಟ್ರೋಫಿ ಫೈನಲ್ ಗೇರಿದ ಮಧ್ಯಪ್ರದೇಶ

23 ವರ್ಷಗಳ ಬಳಿಕ ರಣಜಿ ಟ್ರೋಫಿ ಫೈನಲ್ ಗೇರಿದ ಮಧ್ಯಪ್ರದೇಶ
ಮುಂಬೈ , ಶನಿವಾರ, 18 ಜೂನ್ 2022 (16:41 IST)
ಮುಂಬೈ: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಬೆಂಗಾಳ ತಂಡವನ್ನು ಮಣಿಸಿದ ಮಧ್ಯಪ್ರದೇಶ ಬರೋಬ್ಬರಿ 23 ವರ್ಷಗಳ ನಂತರ ಫೈನಲ್ ಗೇರಿದ ಸಾಧನೆ ಮಾಡಿದೆ.

1989 ರಲ್ಲಿ ಮಧ್ಯಪ್ರದೇಶ ರಣಜಿ ಟ್ರೋಫಿ ಫೈನಲ್ ಆಡಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯವನ್ನಾಡಲಿದೆ. ಸೆಮಿಫೈನಲ್ ನಲ್ಲಿ ಬೆಂಗಾಳ ತಂಡವನ್ನು 174 ರನ್ ಗಳಿಂದ ಮಧ‍್ಯಪ್ರದೇಶ ಮಣಿಸಿದೆ.

ಇನ್ನೊಂದು ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಸೋಲಿಸಿದ ಮುಂಬೈ ಫೈನಲ್ ಗೇರಿದೆ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಈಗ ಮುಂಬೈ ಮತ್ತು ಮಧ್ಯಪ್ರದೇಶ ಮುಖಾಮುಖಿಯಾಗಲಿವೆ.
ಮಧ್ಯಪ್ರದೇಶ ಮೊದಲ ಇನಿಂಗ್ಸ್ ನಲ್ಲಿ 341 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 281 ರನ್ ಗಳಿಗೆ ಆಲೌಟ್ ಆಗಿತ್ತು. ಬೆಂಗಾಳ ಮೊದಲ ಇನಿಂಗ್ಸ್ ನಲ್ಲಿ 273 ಮತ್ತು ದ್ವಿತೀಯ ಸರದಿಯಲ್ಲಿ 175 ರನ್ ಗಳಿಗೆ ಆಲೌಟ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ತಲುಪಿದ ಕ್ಯಾಪ್ಟನ್ ರೋಹಿತ್ ಶರ್ಮಾ