Select Your Language

Notifications

webdunia
webdunia
webdunia
webdunia

ಏಕದಿನ ಪಂದ್ಯಗಳಲ್ಲಿ ಹೊಸ ಇತಿಹಾಸ ರಚಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ಏಕದಿನ ಪಂದ್ಯಗಳಲ್ಲಿ ಹೊಸ ಇತಿಹಾಸ ರಚಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ
ಲಂಡನ್ , ಶುಕ್ರವಾರ, 17 ಜೂನ್ 2022 (20:51 IST)
ಲಂಡನ್: ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಹೊಸ ಇತಿಹಾಸವನ್ನೇ ರಚಿಸಿದೆ. 498 ರನ್ ಗಳ ಮೊತ್ತ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಮೊತ್ತ ಗಳಿಸಿದ ದಾಖಲೆ ಮಾಡಿತು.

ಇದಕ್ಕೂ ಮೊದಲು ಇಂಗ್ಲೆಂಡ್ ತಂಡವೇ ಈ ದಾಖಲೆ ಹೊಂದಿತ್ತು. 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 481 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇಂದಿನ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಆ ದಾಖಲೆಯನ್ನು ಅಳಿಸಿದೆ.

ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಬಟ್ಲರ್, ಡೇವಿಡ್ ಮಲನ್, ಸಾಲ್ಟ್ ಶತಕ ಗಳಿಸಿದರು. ಈ ಪೈಕಿ ಜೋಸ್ ಬಟ್ಲರ್ ಐಪಿಎಲ್ ಫಾರ್ಮ್ ಮುಂದುವರಿಸಿ ಅಜೇಯ 165 ರನ್ ಸಿಡಿಸಿದರೆ, ಸಾಲ್ಟ್ 122, ಮಲನ್ 125 ರನ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಫ್ರಿಕಾ ಟಿ20: ಮತ್ತೆ ಶ್ರೇಯಸ್ ಅಯ್ಯರ್, ರಿಷಬ್ ಪಂತ್ ವಿಫಲ