Select Your Language

Notifications

webdunia
webdunia
webdunia
webdunia

ಸ್ವಿಗ್ಗಿ : ಯುವತಿಗೆ ಮಿಸ್‌ ಯೂ ಮೆಸೇಜ್!?

ಸ್ವಿಗ್ಗಿ :  ಯುವತಿಗೆ ಮಿಸ್‌ ಯೂ ಮೆಸೇಜ್!?
ಮುಂಬೈ , ಮಂಗಳವಾರ, 21 ಜೂನ್ 2022 (11:09 IST)
ಮುಂಬೈ :  ಆನ್ಲೈನ್ನಲ್ಲಿ ಪ್ರತಿಯೊಂದನ್ನು ಆರ್ಡರ್ ಮಾಡಿ ಕುಳಿತಲ್ಲಿಗೆ ಪ್ರತಿಯೊಂದನ್ನು ತರಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ.
 
ಔಷಧಿಯಿಂದ ಹಿಡಿದು ಬಟ್ಟೆ ದಿನಸಿ ಸಾಮಾನುಗಳವರೆಗೆ ಈಗ ಪ್ರತಿಯೊಂದು ಆನ್ಲೈನ್ ಮೂಲಕ ನೀವು ಇದ್ದಲ್ಲಿಗೆ ಬಂದು ತಲುಪುವುದು. ಹೀಗೆ ಆನ್ಲೈನ್ನಲ್ಲಿ ದಿನಸಿ ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ದಿನಸಿ ಸಾಮಾನು ತಂದು ಕೊಟ್ಟ ಡೆಲಿವರಿ ಬಾಯ್ ಒಬ್ಬ ನಂತರ ಆಕೆಗೆ ಮಿಸ್ ಯೂ ಲಾಟ್ ಎಂದು ಸಂದೇಶ ಕಳುಹಿಸಿದ್ದಾನೆ.

ಇದನ್ನು ಮಹಿಳೆ ಆನ್ಲೈನ್ನಲ್ಲಿ ಹಂಚಿಕೊಂಡಿದ್ದು ಇದು ದೊಡ್ಡ ಸುದ್ದಿಯಾಗುತ್ತಿದ್ದಂತೆ ಸ್ವಿಗ್ಗಿ ಸಂಸ್ಥೆ ಸಂದೇಶ ಕಳುಹಿಸಿದ ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದು ಹಾಕಿದೆ.

ಟ್ವಿಟ್ಟರ್ನಲ್ಲಿ ಪ್ರಾಪ್ತಿ ಎಂಬ ಮಹಿಳೆ ತಮಗೆ ಡೆಲಿವರಿ ಬಾಯ್ ಮೆಸೇಜ್ ಮಾಡಿದ್ದನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಬಳಿಕ ಸ್ವಿಗ್ಗಿ ಸಂಸ್ಥೆ, ಗ್ರಾಹಕರಿಗೆ ಅಸಂಬದ್ಧ ಸಂದೇಶದ ಕಳುಹಿಸಿದ  ಡೆಲಿವರಿ ಏಜೆಂಟ್ ಅನ್ನು ಸೇವೆಯಿಂದ ನಿಷ್ಕ್ರಿಯಗೊಳಿಸಿದೆ.

ಮಹಿಳೆಯ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸಿದ ಡೆಲಿವರಿ ಏಜೆಂಟ್ ನಂತರ ಆಕೆಗೆ ಮಿಸ್ ಯು ಲಾಟ್ ಎಂಬ ಸಂದೇಶ ಕಳುಹಿಸಿದ್ದ. ನಿಮ್ಮ ಸೌಂದರ್ಯ ಚೆನ್ನಾಗಿದೆ, ನಿಮ್ಮ ನಡವಳಿಕೆ ಅದ್ಭುತವಾಗಿದೆ ಎಂದು ಸಂದೇಶ ಕಳುಹಿಸಿದ್ದ.

 ಇದನ್ನು ನೋಡಿದ ಯುವತಿ ಪ್ರಾಪ್ತಿ ಸ್ವಿಗ್ಗಿಯ ಸಪೋರ್ಟ್ ಟೀಮ್ಗೆ  ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಮಂಗಳವಾರ ರಾತ್ರಿ (ಜೂನ್ 14) ಸ್ವಿಗ್ಗಿ ಇನ್ಸ್ಟಾಮಾರ್ಟ್ನಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿರುವುದಾಗಿ ಪ್ರಾಪ್ತಿ  ಟ್ವೀಟ್ನಲ್ಲಿ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪಹರಣವಾದಂತೆ ನಾಟಕವಾಡಿ ಮನೆಯವರಿಂದಲೇ ಹಣ ಪೀಕಲು ಮುಂದಾದ ಯುವಕ