Select Your Language

Notifications

webdunia
webdunia
webdunia
webdunia

ಅಪಹರಣವಾದಂತೆ ನಾಟಕವಾಡಿ ಮನೆಯವರಿಂದಲೇ ಹಣ ಪೀಕಲು ಮುಂದಾದ ಯುವಕ

ಅಪಹರಣವಾದಂತೆ ನಾಟಕವಾಡಿ ಮನೆಯವರಿಂದಲೇ ಹಣ ಪೀಕಲು ಮುಂದಾದ ಯುವಕ
ಕಾನ್ಪುರ , ಮಂಗಳವಾರ, 21 ಜೂನ್ 2022 (09:30 IST)
ಕಾನ್ಪುರ: ಆನ್ ಲೈನ್ ಗೇಮ್ ಆಟವಾಡಿ ಹಣ ಕಳೆದುಕೊಂಡ ಪದವಿ ವಿದ್ಯಾರ್ಥಿಯೊಬ್ಬ ತಾನು ಅಪಹರಣವಾದಂತೆ ನಾಟಕವಾಡಿ ಮನೆಯವರಿಂದ ಹಣ ಪೀಕಲು ಮುಂದಾಗಿದ್ದ. ಆದರೆ ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪೋಷಕರು ಯುವಕನಿಗೆ ಕಾಲೇಜು ಫೀಸ್ ಕಟ್ಟಲು 30 ಸಾವಿರ ರೂ. ನೀಡಿದ್ದರು. ಆದರೆ ಆನ್ ಲೈನ್ ಗೇಮ್ ಗೀಳು ಹಚ್ಚಿಕೊಂಡಿದ್ದ ಯುವಕ ಅದನ್ನು ಗೇಮ್ ಆಡುತ್ತಾ ಕಳೆದುಕೊಂಡಿದ್ದ.

ಬಳಿಕ ಹಣಕ್ಕಾಗಿ ಮನೆಯವರಿಗೆ ಕರೆ ಮಾಡಿ ತಾನು ಅಪಹರಣವಾಗಿದ್ದೇನೆ. 1 ಲಕ್ಷ ರೂ. ನೀಡದೇ ಇದ್ದರೆ ಅಪಹರಣಕಾರರು ನನ್ನನ್ನು ಕೊಲೆ ಮಾಡುತ್ತಾರೆ ಎಂದು ನಾಟಕವಾಡಿದ್ದ. ಬಳಿಕ ಯುವಕನ ತಂದೆ ಪೊಲೀಸ್ ಠಾಣೆಗೆ ತೆರಳಿ ಮಗನನ್ನು ಹುಡುಕಿಕೊಡಲು ನೆರವು ಕೇಳಿದ್ದರು. ಆತನ ಫೋನ್ ಜಾಡು ಹಿಡಿದು ಪತ್ತೆ ಮಾಡಿದಾಗ ನಿಜ ಘಟನೆಯನ್ನು ಬಾಯ್ಬಿಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾಗೃಹಕ್ಕೆ ದಾಳಿ ಮಾಡಿದಾಗ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ: ಕೋರ್ಟ್