Publish Date: Mon, 20 Jun 2022 (09:10 IST)
Updated Date: Mon, 20 Jun 2022 (09:29 IST)
ನವದೆಹಲಿ: ಊಟ ಕೊಡಲಿಲ್ಲವೆಂಬ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿ ಗಂಡ, ಹೆಂಡತಿಯನ್ನು ಕೊಲೆ ಮಾಡಿ ರಾತ್ರಿ ಆಕೆಯ ಮೃತದೇಹದೊಂದಿಗೇ ಮಲಗಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.
ದಂಪತಿ ಒಟ್ಟಿಗೇ ಮದ್ಯಪಾನ ಮಾಡಿದ್ದರು. ಬಳಿಕ ಗಂಡ ರಾತ್ರಿ ಊಟ ಬಡಿಸುವಂತೆ ಕೇಳಿದ್ದ. ಆದರೆ ಹೆಂಡತಿ ಬಡಿಸಲಿಲ್ಲ ಎಂದು ಇಬ್ಬರ ನಡುವೆ ವಾಗ್ವಾದವಾಗಿತ್ತು.
ಇದೇ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದ್ದ ಗಂಡ ಕುಡಿದ ಮತ್ತಿನಲ್ಲಿ ಆಕೆ ಕೊಲೆಯಾಗಿರುವುದೂ ಅರಿವಿಗೆ ಬಾರದೇ ಆಕೆಯ ಪಕ್ಕದಲ್ಲೇ ಮಲಗಿದ್ದ. ಬೆಳಿಗ್ಗೆ ಎದ್ದು ನೋಡಿದಾಗ ಆತನಿಗೆ ವಾಸ್ತವ ಅರಿವಾಗಿತ್ತು. ಬಳಿಕ ಮನೆಯಲ್ಲಿದ್ದ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದ್ದ. ಆದರೆ ಪೊಲೀಸರು ಆರೋಪಿಯನ್ನು ಅರೆಸ್ಟ್ ಆಡಿದ್ದಾರೆ.