Publish Date: Sat, 18 Jun 2022 (08:30 IST)
Updated Date: Sat, 18 Jun 2022 (09:03 IST)
ಹೈದರಾಬಾದ್: ಡ್ರಾಪ್ ಕೊಡುವ ನೆಪದಲ್ಲಿ ಗೆಳತಿಯನ್ನು ಕಾರಿನಲ್ಲಿ ಕರೆದೊಯ್ದ ಯುವಕ ಆಕೆ ಮೇಲೆ ಅತ್ಯಾಚಾರವೆಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಪಾರ್ಟಿಯೊಂದಕ್ಕೆ ಹೋಗಿದ್ದ ಯುವತಿಗೆ ಆರೋಪಿ ಯುವಕ ಲಿಫ್ಟ್ ಕೊಡುವುದಾಗಿ ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಜೊತೆಗಿದ್ದ ಬೇರೆ ಇಬ್ಬರು ಕಾರಿನಿಂದ ಇಳಿದ ಮೇಲೆ ಯುವತಿ ಏಕಾಂಗಿಯಾಗಿದ್ದಳು. ಈ ವೇಳೆ ಯುವಕ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಆತನಿಂದ ತಪ್ಪಿಸಿಕೊಂಡ ಯುವತಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಸಹಾಯ ಕೇಳಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.