Select Your Language

Notifications

webdunia
webdunia
webdunia
webdunia

ಮಾಂಗಲ್ಯ ಸರ ಕೀಳು ಬಿಡದ ಮಹಿಳೆಯನ್ನು ಕೆರೆಗೆ ತಳ್ಳಿ ಕೊಂದ ಸರಗಳ್ಳ!

Woman  killed an underage woman in the lake
bangalore , ಗುರುವಾರ, 16 ಜೂನ್ 2022 (20:53 IST)
ಚೈನ್ ಕೀಳಲು ಬಿಡದಿದ್ದಕ್ಕೆ ಮಹಿಳೆಯನ್ನು ಸರಗೊಳ್ಳನೊಬ್ಬ ಕೆರೆಗೆ ತಳ್ಳಿ ಕೊಂದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ನಗರದ ಹೊರವಲಯದ ಗವೇನಹಳ್ಳಿ ಗ್ರಾಮದ ನಿವಾಸಿ ನೀಲ (50) ಮೃತ ಮಹಿಳೆ. 
ಕೆರೆಯ ಬಳಿ ಕಾಲು ದಾರಿಯಲ್ಲಿ ಮಹಿಳೆ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ನೀಲ ಅವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಳ್ಳನೊಬ್ಬ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ನೀಲ ವಿರೋಧ ಪಕ್ಕದಲ್ಲಿಯೇ ಇದ್ದ ಕೆರೆಗೆ ತಳ್ಳಿದ್ದಾನೆ. 
ಕೆರೆಗೆ ಬಿದ್ದ ನೀಲ ಈಜು ಬಾರದೆ ಮೃತಪಟ್ಟಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಖದೀಮನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಡಿ ವಿಚಾರಣೆಯಿಂದ 20ರವರೆಗೆ ಸಮಯವಕಾಶ ಕೇಳಿದ ರಾಹುಲ್ ಗಾಂಧಿ