Select Your Language

Notifications

webdunia
webdunia
webdunia
webdunia

ಸ್ವಿಗ್ಗಿ, ಝೋಮ್ಯಾಟೊಗೆ ಗಡುವು!

ಸ್ವಿಗ್ಗಿ, ಝೋಮ್ಯಾಟೊಗೆ ಗಡುವು!
ನವದೆಹಲಿ , ಮಂಗಳವಾರ, 14 ಜೂನ್ 2022 (14:35 IST)
ನವದೆಹಲಿ : ಝೋಮ್ಯಾಟೊ ಹಾಗೂ ಸ್ವಿಗ್ಗಿಯಂತಹ ಆನ್ಲೈನ್ ಆಹಾರ ಉದ್ಯಮ ಕಂಪನಿಗಳ ವಿರುದ್ಧ ಗ್ರಾಹಕರ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸುವ ಕುರಿತು,
 
15 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೋಮವಾರ ನಿರ್ದೇಶಿಸಿದೆ. ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚಗಳಲ್ಲಿ ಅಸಮಾನತೆ, ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣ ಹಾಗೂ ಬೆಲೆಯಲ್ಲಿ ವ್ಯತ್ಯಾಸ,

ಈ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೇತೃತ್ವದ ಸಭೆಯು ಸ್ವಿಗ್ಗಿ, ಝೋಮ್ಯಾಟೊ ಮೊದಲಾದ ಆನ್ಲೈನ್ ಆಹಾರ ಉದ್ಯಮ ಕಂಪನಿಗಳಿಗೆ 15 ದಿನಗಳಲ್ಲೇ ಗ್ರಾಹಕರ ಕುಂದುಕೊರತೆ ಕಾರ್ಯವಿಧಾನ ಸುಧಾರಿಸುವ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ.

ಇದರೊಂದಿಗೆ ಎಲ್ಲ ಆನ್ಲೈನ್ ಆಹಾರ ಉದ್ಯಮಗಳು ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚ, ತೆರಿಗೆ ಮೊದಲಾದವುಗಳನ್ನು ಪ್ರತ್ಯೇಕವಾಗಿ ಬಿಲ್ನಲ್ಲಿ ನಮೂದಿಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ.

-ಡೆಲಿವರಿ, ಪ್ಯಾಕೆಜಿಂಗ್ ವೆಚ್ಚದಲ್ಲಿ ಅಸಮಾನತೆ
-ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣದಲ್ಲಿ ವ್ಯತ್ಯಾಸ
-ಬುಕ್ಕಿಂಗ್ ವೇಳೆಯ ಡೆಲಿವರಿ ಅವಧಿಯಲ್ಲಿ ಆಹಾರ ಪೂರೈಸದಿರುವುದು


Share this Story:

Follow Webdunia kannada

ಮುಂದಿನ ಸುದ್ದಿ

ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ ಸೂಚನೆ