18 ತಿಂಗಳಲ್ಲಿ 10 ಲಕ್ಷ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಸಚಿವಾಲಯಗಳಿಗೆ ಸೂಚನೆ ನೀಡಿದ್ದಾರೆ.
ಮಾನವ ಸಂಪನ್ಮೂಲ ಅಗತ್ಯತೆ ಕುರಿತು ಮಂಗಳವಾರ ವಿವಿಧ ಇಲಾಖೆಗಳ ಜೊತೆ ಸಂವಾದ ನಡೆಸಿದ ನಂತರ 18 ತಿಂಗಳ ಅವಧಿಯಲ್ಲಿ ಕನಿಷ್ಠ 10 ಲಕ್ಷ ನೇಮಕಾತಿ ಪ್ರಕ್ರಿಯೆ ಪೂರೈಸಬೇಕು ಎಂದು ಹೇಳಿದರು.
ಪ್ರಧಾನಿ ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆಬಂದಾಗ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಉದ್ಯೋಗ ಸೃಷ್ಟಿ ಮಾಡುವುದಿರಲಿ ಇರುವ ಉದ್ಯೋಗವನ್ನು ಜನರು ಕಳೆದುಕೊಳ್ಳುವಂತಾಯಿತು. ಕೊರೊನಾ ವೈರಸ್ ನಿಂದ ಉದ್ದಿಮೆಗಳು ಉದ್ಯೋಗ ಕಡಿತ ಮಾಡಿದರೆ ಬ್ಯಾಂಕಿಂಗ್ ಸೇರಿದವಂತೆ ವಿವಿಧ ಇಲಾಖೆಗಳನ್ನು ಸೇರ್ಪಡೆಗೊಳಿಸಿದ್ದರಿಂದ ಉದ್ಯೋಗ ಕಡಿತ ಉಂಟಾಗಿತ್ತು.