Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಗೆಳತಿಯನ್ನೇ ಕೊಂದ!

ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಗೆಳತಿಯನ್ನೇ ಕೊಂದ!
ಛತ್ತಿಸ್ಗಢ , ಬುಧವಾರ, 14 ಡಿಸೆಂಬರ್ 2022 (12:00 IST)
ರಾಯ್ಪುರ್ : ಗೆಳೆಯನೊಬ್ಬ ತನ್ನ ಗೆಳತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೋಲಿನಿಂದ ಥಳಿಸಿ ಕೊಂದ ಘಟನೆ ಛತ್ತಿಸ್ಗಢದ ಧಮ್ತಾರಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ರೇಶಮಿ ಸಾಹು (25) ಎಂದು ಗುರುತಿಸಲಾಗಿದೆ. ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯ ಟೀ ಸ್ಟಾಲ್ನಲ್ಲಿ ಈ ಘಟನೆ ನಡೆದಿದೆ. ರೇಶಮಿ ಜೀವನೋಪಾಯಕ್ಕಾಗಿ ಮಗರ್ಲೋಡ್ ನಗರ ಪಂಚಾಯತ್ ಕಚೇರಿ ಬಳಿ ಟೀ ಸ್ಟಾಲ್ ನಡೆಸುತ್ತಿದ್ದಳು.

ಈಕೆಗೆ ಖಿಸೋರಾ ಗ್ರಾಮದ ನಿವಾಸಿಯೊಬ್ಬನ ಪರಿಚಯವಾಗಿ ಪ್ರೀತಿಗೆ ಬದಲಾಗಿತ್ತು. ಇಬ್ಬರು 4 ವರ್ಷದಿಂದ ಸಂಬಂಧವನ್ನು ಹೊಂದಿದ್ದರು.

ಆದರೆ ರೇಶಮಿಯ ಗೆಳೆಯ ಆಕೆಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಅಷ್ಟೇ ಅಲ್ಲದೇ ಈ ವಿಷಯಕ್ಕೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಜಗಳ ತೀವ್ರಗೊಂಡಿದ್ದು, ರೇಶಮಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಅದಾದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. 

ಆತ ನಡೆಸಿದ ಹಲ್ಲೆಯಿಂದಾಗಿ ತಲೆಗೆ ಗಂಭೀರ ಗಾಯವಾಗಿತ್ತು. ರೇಶಮಿಯಾಳ ತಲೆಗೆ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಮಸ್ಕ್‌ ?