Publish Date: Thu, 24 Nov 2022 (10:45 IST)
Updated Date: Thu, 24 Nov 2022 (08:46 IST)
ಬೆಂಗಳೂರು : ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯೊಬ್ಬಳು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ನಲ್ಲಿ ನಡೆದಿದೆ.
ಐಟಿ ಉದ್ಯಮಿ ಆಗಿರುವ ಶ್ವೇತಾ (27) ನ.10ರಂದು ನೇಣಿಗೆ ಶರಣಾಗಿದ್ದಾಳೆ. ಐಬಿಎಂ ಕಂಪನಿಯ ಉದ್ಯೋಗಿಯಾಗಿದ್ದ ಶ್ವೇತಾ 11 ತಿಂಗಳ ಹಿಂದಷ್ಟೇ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನೊಂದಿಗೆ ವಿವಾಹವಾಗಿದ್ದಳು.
ಆದರೆ ಮದುವೆಗೂ ಮುನ್ನ ಅಭಿಷೇಕ್ಗೆ ಯುವತಿಯೊಬ್ಬಳೊಂದಿಗೆ ಸಂಬಂಧವಿತ್ತು ಎನ್ನುವ ವಿಷಯವು ಶ್ವೇತಾಳಿಗೆ ಮದುವೆಯಾದ ಬಳಿಕ ತಿಳಿದಿದೆ. ಈ ವಿಚಾರ ಗೊತ್ತಾದ ಬಳಿಕ ಶ್ವೇತಾ ಹಾಗೂ ಅಭಿಷೇಕ್ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿತ್ತು.
ಅದಾದ ಬಳಿಕ ಪರಸ್ಪರ ರಾಜಿ ಪಂಚಾಯತಿ ನಡೆದಿತ್ತು. ಆ ನಂತರ ಅಭಿಷೇಕ್ ಹಾಗೂ ಶ್ವೇತಾ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ನಡುವೆ ಅಭಿಷೇಕ್ ತನ್ನ ಹಳೆಯ ಚಾಳಿಯನ್ನೇ ಪುನಃ ಮುಯಂದುವರಿಸಿದ್ದಾನೆ. ಇದರಿಂದಾಗಿ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪಗಳು ಮೃತ ಶ್ವೇತಾಳ ಕುಟುಂಬದಿಂದ ಕೇಳಿಬಂದಿದೆ.