Select Your Language

Notifications

webdunia
webdunia
webdunia
webdunia

ವರ ಕೊಟ್ಟ ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ ಎಂದು ಮದುವೆ ನಿರಾಕರಿಸಿದ ವಧು!

ವರ ಕೊಟ್ಟ ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ ಎಂದು ಮದುವೆ ನಿರಾಕರಿಸಿದ ವಧು!
ಡೆಹ್ರಾಡೂನ್ , ಶುಕ್ರವಾರ, 18 ನವೆಂಬರ್ 2022 (07:33 IST)
ಡೆಹ್ರಾಡೂನ್ : ವರನ ಮನೆಯವರು ಉಡುಗೊರೆಯಾಗಿ ನೀಡಿದ್ದ ಲೆಹೆಂಗಾ ಇಷ್ಟವಾಗದ್ದಕ್ಕೆ ವಧುವೊಬ್ಬಳು ಮದುವೆಯನ್ನು ರದ್ದುಗೊಳಿಸಿದ ವಿಲಕ್ಷಣ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ.

ಉತ್ತರಾಖಂಡದ ಹಲ್ದ್ವಾನಿಯ ಹೆಲ್ತ್ ಕೇರ್ ವೃತ್ತಿಯಲ್ಲಿ ಕೆಲಸ ಮಾಡುವ ರಾಣಿಖೇತ್ ಮೂಲದ ಹುಡುಗನೊಂದಿಗೆ ಹುಡುಗಿಯ ಮದುವೆಯನ್ನು ನಿಶ್ಚಯಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮದುವೆಗೂ ಮೊದಲು ವರನ ತಂದೆ ಲಕ್ನೋದಿಂದ 10,000 ರೂ. ಮೌಲ್ಯದ ಲೆಹಂಗಾವನ್ನು ಸೊಸೆಯಾಗಿ ಬರುವವಳಿಗೆ ಎಂದು ಆರ್ಡರ್ ಮಾಡಿದ್ದರು. ಈ ಆರ್ಡರ್ ಅನ್ನು ನೇರವಾಗಿ ವಧು ಮನೆಗೆ ಕಳುಸಿದ್ದರು.

ಆ ಲೇಹಂಗಾವನ್ನು ನೋಡಿದ ವಧುಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ವಧು ಕಡಿಮೆ ಕ್ವಾಲಿಟಿಯ ಲೆಹಂಗಾ ಎಂದು ಜಗಳ ತೆಗೆದಿದ್ದಾಳೆ. ಈ ಜಗಳವೇ ಉಲ್ಬಣಗೊಂಡಿದ್ದು, ವಧು ತನ್ನ ನಿಶ್ಚಿತ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರವೇ ಸ್ಮಾರ್ಟ್ಫೋನ್ಗಳಿಗೆ ಏಕರೂಪದ ಚಾರ್ಜರ್