Publish Date: Fri, 04 Nov 2022 (09:30 IST)
Updated Date: Fri, 04 Nov 2022 (09:32 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಮದುವೆ ದಿನಾಂಕ ನಿಗದಿಯಾಗಿದೆ. ಮನೆಯವರೇ ನೋಡಿ ನಿಶ್ಚಯಿಸಿದ ಹುಡುಗನ ಜೊತೆ ಅದಿತಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಕಳೆದ ವರ್ಷ ಅದಿತಿ ಉದ್ಯಮಿ ಯಶಸ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಹುಡುಗನನ್ನು ಪರಿಚಯಿಸಿದ್ದರು.
ಇದೇ ತಿಂಗಳು ನವಂಬರ್ 27 ಕ್ಕೆ ಅದಿತಿ ಪ್ರಭುದೇವ-ಯಶಸ್ ಮದುವೆಯಾಗುತ್ತಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂತೂ ಕನ್ನಡದ ಅಪ್ಪಟ ಪ್ರತಿಭಾವಂತ ನಟಿ ಈಗ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ.
-Edited by Rajesh Patil