Select Your Language

Notifications

webdunia
webdunia
webdunia
Thursday, 3 April 2025
webdunia

ಹತ್ಯೆ ಪ್ರಕರಣ : ಪೊಲೀಸರ ಮುಂದೆ ರೋಚಕ ಸತ್ಯ ಬಾಯ್ಬಿಟ್ಟ ಕಿರಾತಕ!

ನವದೆಹಲಿ
ನವದೆಹಲಿ , ಬುಧವಾರ, 16 ನವೆಂಬರ್ 2022 (10:16 IST)
ನವದೆಹಲಿ : ಪ್ರಿಯಕರ ಅಫ್ತಾಬ್ನಿಂದಲೇ ಶ್ರದ್ಧಾ ಭೀಕರ ಹತ್ಯೆ ಪ್ರಕರಣವು ದಿನೇ ದಿನೇ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅಫ್ತಾಬ್ ತನ್ನ ನಂಬಿ ಬಂದವಳ ಹತ್ಯೆ ಮಾಡಿದ್ದು ಹೇಗೆ ಎಂಬುದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
 
ಖಾಕಿ ಎದುರು ಎಳೆಎಳೆಯಾಗಿ ಹತ್ಯೆ ಕಥನವನ್ನು ಕಿರಾತಕ ಬಿಚ್ಚಿಟ್ಟಿದ್ದು, ಅಫ್ತಾಬ್ ಹೇಳಿದ ಕಥೆ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಕೆಲವು ದಿನಗಳ ಬಳಿಕ ದೆಹಲಿಗೆ ಶಿಫ್ಟ್ ಆದೆವು. ದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಮತ್ತೆ ದೆಹಲಿಗೆ ಮರಳಿದೆವು. ದೆಹಲಿಯ ಪಹರ್ಗಂಜ್ನ ಹೋಟೆಲ್ನಲ್ಲಿ ಒಂದು ದಿನ ಉಳಿದುಕೊಂಡೆವು.

ನಂತರ ದಕ್ಷಿಣ ದೆಹಲಿಯ ಸೈದುಲಾಜಾಬ್ನಲ್ಲಿರುವ ಹಾಸ್ಟೆಲ್ನಲ್ಲಿ ತಂಗಿದ್ದೆವು. ಮೇ 15ರಂದು ಮೆಹ್ರೋಲಿಯ ಛತ್ತರಪುರ ಪಹಾಡಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಒಟ್ಟಿಗೆ ಇದ್ದೆವು. ಮೇ 18ರಂದು ಮದುವೆ ವಿಚಾರಕ್ಕೆ ಜಗಳ ಆರಂಭವಾಯಿತು. ನಾನು ಅವಳ ಬಾಯಿ ಮುಚ್ಚುವ ಪ್ರಯತ್ನ ಮಾಡಿದೆ. ಬಳಿಕ ಕತ್ತು ಹಿಸುಕಿದೆ ಅವಳು ಸಾವನ್ನಪ್ಪಿದಳು. 

ಮೇ 19ರಂದು ದೇಹದ ವಿಲೇವಾರಿ ಮಾಡುವ ಬಗ್ಗೆ ಚಿಂತಿಸಿದೆ. ಬಳಿಕ ಮಾರ್ಕೆಟ್ನಿಂದ 23,500 ರೂಪಾಯಿ ನೀಡಿ ಫ್ರಿಡ್ಜ್ ಖರೀದಿಸಿದೆ. ಸಣ್ಣ ಹರಿತವಾದ ಗರಗಸ ಖರೀದಿಸಿದೆ. ಮೇ 20ರಂದು ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿದೆ. ನಿತ್ಯ ರಾತ್ರಿ ಒಂದು ಗಂಟೆಯ ಬಳಿಕ ಕವರ್ ಗಳನ್ನು ಕಾಡಿನ ಮಧ್ಯಕ್ಕೆ ಹೋಗಿ ಎಸೆದು ಬರ್ತಿದ್ದೆ.

ಯಾರಿಗೂ ಸಂಶಯ ಬಾರದಿರಲು ಅದೇ ಏರಿಯಾದಲ್ಲಿ ಓಡಾಡುತ್ತಿದ್ದೆ, ರಾತ್ರಿ ಹೆಚ್ಚು ಸದ್ದು ಆಗದಂತೆ ನೋಡಿಕೊಳ್ಳಲು ನೀರಿನ ಮೋಟರ್ ಆನ್ ಮಾಡುತ್ತಿದ್ದೆ. ವಾಸನೆ ತಡೆಯಲು ಅಗರಬತ್ತಿ ಬಳಸುತ್ತಿದ್ದೆ. ಕೊಲೆಯ ಬಳಿಕ ದೇಹ ವೀಲೆವಾರಿ ಮಾಡಲು ಟೆಲಿವಿಷನ್ ಅಪರಾಧ ಸರಣಿ ‘ಡೆಕ್ಸ್ಟರ್’ ನೆರವಾಯಿತು. ಗೂಗಲ್ನಿಂದಲೂ ನಾನು ಮಾಹಿತಿ ಕಲೆ ಹಾಕಿ ಕೆಲಸ ಮಾಡಿ ಮುಗಿಸಿದೆ ಎಂಬುದಾಗಿ ತಿಳಿಸಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ : ಡೊನಾಲ್ಡ್ ಟ್ರಂಪ್