Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಂದ ಹೆಂಡತಿ

A wife who killed her husband who was an obstacle to an immoral relationship
bangalore , ಬುಧವಾರ, 30 ನವೆಂಬರ್ 2022 (19:53 IST)
ಅನೈತಿಕ ಸಂಬಂಧಕ್ಕೆ‌ ಅಡ್ಡಿಯಾಗಿದ್ದ ಗಂಡನನ್ನೇ ಪ್ರಿಯಕರನೊಂದಿಗೆ ಪ್ಲ್ಯಾನ್‌ ಮಾಡಿ ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರನನ್ನ ಸೋಲದೇವನಹಳ್ಳಿ ಪೊಲೀಸರು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
48 ವರ್ಷದ ದೆಸೆಗೌಡ ಕೊಲೆ ಮಾಡಿದ ಆರೋಪದಡಿ ಪತ್ನಿ ಜಯಲಕ್ಷ್ಮೀ ಹಾಗೂ ಪ್ರಿಯಕರ ರಾಜೇಶ್ ನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.  ಸೋಲದೇವಹಳ್ಳಿಯ ಠಾಣಾ ವ್ಯಾಪ್ತಿಯ ಫಾರ್ಮ್ ಹೌಸ್ ವೊಂದರಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ವಿವಾಹವಾಗಿ 16 ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ದಂಪತಿ ನಡುವೆ ವೈಮನಸ್ಸು ಮೂಡಿತ್ತು. ಈ‌ ಮಧ್ಯೆ ಜಯಶ್ರೀ ಜೊತೆ ರಾಜೇಶ್ ಜೊತೆ ಪರಿಚಯವಾಗಿ ಅನೈತಿಕ ಸಂಬಂಧಕ್ಕೆ ತಿರುಗಿತ್ತು‌‌.‌ ಗಂಡ ಮನೆಯಲ್ಲಿ ಇಲ್ಲದಿರುವಾಗ ಆಗಾಗ ರಾಜೇಶ್ ಬಂದು ಹೋಗುತ್ತಿದ್ದ‌. ಈ ವಿಚಾರ ಗಂಡನಿಗೆ ತಿಳಿದ ಪತ್ನಿಯೊಂದಿಗೆ ಜಗಳವಾಡಿದ್ದ.‌ ಪ್ರತಿದಿನ ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗುದ್ದಾಟವಾಗುತಿತ್ತು.‌ ಗಂಡನ ಕಿರುಕುಳ ತಾಳಲಾರದೆ ರಾಜೇಶ್ ಬಳಿ ಹೇಳಿಕೊಂಡಿದ್ದಳು. ಇಬ್ಬರು ಮಾತನಾಡಿಕೊಂಡು ದೆಸೇಗೌಡನನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮರ್ಡರ್  ಮಾಡಿ ಶವವನ್ನ ಚರಂಡಿಯೊಳಗೆ ಎಸೆದಿದ್ದರು. ಹೆಂಡ್ತಿ
ಪೂರ್ವಾಸಂಚಿನಂತೆ ಕಳೆದ‌ ಭಾನುವಾರ ರಾತ್ರಿ ರಾಜೇಶ್, ಪ್ರಿಯತಮೆ ಮನೆಗೆ ಬಂದಿದ್ದಾನೆ.‌ ದನದ ಕೊಟ್ಟಿಗೆಯಲ್ಲಿದ್ದ ಹಗ್ಗ ಎತ್ತಿಕೊಂಡು ದೇಸೆಗೌಡನ ಕತ್ತುಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಕೈ ಕಾಲುಗಳಿಗೆ ಹಗ್ಗ ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ಶವವಿರಿಸಿ ಕಾರಿನಲ್ಲಿ ಇಬ್ಬರು ತೆರಳಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ‌ ಸಂಪರ್ಕಿಸುವ ರಾಮನಗರ ಬಳಿಯ ಚರಂಡಿಯೊಳಗಿಳಿದು 50 ಮೀಟರ್ ಯೊಳಗೆ ಶವ ಎಸೆದಿದ್ದಾರೆ. ಮೊಬೈಲ್ 500 ಮೀಟರ್ ದೂರ ಎಸೆದರೆ ಹಗ್ಗವನ್ನ ಮತ್ತೊಂದು ಕಡೆ ಬಿಸಾಕಿ ಸಾಕ್ಷ್ಯನಾಶ ಮಾಡಿದ್ದರು. ಬಳಿಕ ಮನೆಗೆ ಬಂದು ಮಾರನೇ ದಿನ ತನ್ನ ಗಂಡ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಳು.
ತನಿಖೆ ಕೈಗೊಂಡ ಪೊಲೀಸರಿಗೆ ಗಂಡನ ಮನೆಯವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೃತ ದೇಸೆಗೌಡ ಸಹೋದರ ಪೊಲೀಸರ ಮುಂದೆ ಜಯಶ್ರೀ ಅನೈತಿಕ ಸಂಬಂಧ ಬಗ್ಗೆ ಮಾಹಿತಿ ನೀಡಿದ್ದ‌. ಈ ಬಗ್ಗೆ ಪ್ರಶ್ನಿಸಿದಾಗ ರಾಜೇಶ್ ತನ್ನ ತಮ್ಮನಂತೆ ಎಂದು ಸುಳ್ಳು ಹೇಳಿದ್ದಳು. ಜಯಶ್ರೀ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರು ಆಕೆಯ ಮೊಬೈಲ್ ಸಿಡಿಆರ್ ಪರಿಶೀಲಿಸಿದಾಗ ರಾಜೇಶ್ ಜೊತೆ ಹಲವು ಬಾರಿ ಪೋನ್ ಮಾಡಿರುವುದು ಗೊತ್ತಾಗಿದೆ. ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಗಂಡನನ್ನ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ .

Share this Story:

Follow Webdunia kannada

ಮುಂದಿನ ಸುದ್ದಿ

ಧೂಮಪಾನಿಯರೇ ಎಚ್ಚರ..! ಎಚ್ಚರ..!