Select Your Language

Notifications

webdunia
webdunia
webdunia
webdunia

ಶಾಲಾ ಶಿಕ್ಷಕನಿಂದ ಲೈಂಗಿಕ ಕಿರುಕುಳಕ್ಕೊಳಗಾದ ವಿದ್ಯಾರ್ಥಿ 23 ವರ್ಷಗಳ ಬಳಿಕ ಮಾಡಿದ್ದೇನು?

ಶಾಲಾ ಶಿಕ್ಷಕನಿಂದ ಲೈಂಗಿಕ ಕಿರುಕುಳಕ್ಕೊಳಗಾದ  ವಿದ್ಯಾರ್ಥಿ 23 ವರ್ಷಗಳ ಬಳಿಕ ಮಾಡಿದ್ದೇನು?
ಡಾರ್ಜಿಲಿಂಗ್ , ಶನಿವಾರ, 17 ಅಕ್ಟೋಬರ್ 2020 (09:34 IST)
ಡಾರ್ಜಿಲಿಂಗ್ : ಹಾಂಗ್ ಕಾಂಗ್ ಮೂಲದ 37 ವರ್ಷದ ಮಹಿಳೆಯೊಬ್ಬಳು ಶಾಲಾ ಶಿಕ್ಷಕನಿಂದ ಕಿರುಕುಳಕ್ಕೊಳಗಾದ 23 ವರ್ಷಗಳ ಬಳಿಕ ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ.

ಮಹಿಳೆ 14 ವರ್ಷದವಳಿದ್ದಾಗ ಮನೆಯಲ್ಲಿ ಟ್ಯೂಷನ್ ನೀಡುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾನಂತೆ. ಈ ಬಗ್ಗೆ ಮಹಿಳೆ ಈಗ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿಕ್ಷಕನ ಬಗ್ಗೆ ತನಿಖೆ ನಡೆಸಿದ್ದಾರೆ. ಆ ವೇಳೆ ಆತ 20ಕ್ಕೂ ಹೆಚ್ಚು ಶಾಲೆಗಳಲ್ಲಿ ಪಾಠ ಹೇಳಿಕೊಟ್ಟಿದ್ದು, ಈತನಿಂದ ಅನೇಕ ವಿದ್ಯಾರ್ಥಿಗಳು ಕಿರುಕುಳಗೊಳಗಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸಾಕ್ಷ್ಯಗಳನ್ನು ಕಲೆಹಾಕಿದ ಪೊಲೀಸರು ಬಳಿಕ ಶಿಕ್ಷಕನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭತ್ತದ ಗದ್ದೆಯಲ್ಲಿ ಯುವತಿಯ ಕೈಕಾಲು ಕಟ್ಟಿ ಮಾನಭಂಗ ಎಸಗಿ ಮಾಡಿದ್ದೇನು?