Select Your Language

Notifications

webdunia
webdunia
webdunia
webdunia

ಆಫ್ ಲೈನ್ ಕ್ಲಾಸ್ ತರಗತಿಗೆ ಹಾಜರಾಗು ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಆತ್ಮಹತ್ಯೆ
ಹೈದರಾಬಾದ್: ಆಫ್ ಲೈನ್ ತರಗತಿಗೆ ಹಾಜರಾಗು ಎಂದು ಪೋಷಕರು ಹೇಳಿದ್ದಕ್ಕೆ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ವಿದ್ಯಾರ್ಥಿನಿಗೆ ಆನ್ ಲೈನ್ ತರಗತಿಯಲ್ಲೇ ಮುಂದುವರಿಯುವ ಮನಸ್ಸಿತ್ತು. ಹಾಗಿದ್ದರೂ ಪೋಷಕರು ಆಫ್ ಲೈನ್ ತರಗತಿಗೆ ಹೋಗು ಎಂದು ಒತ್ತಾಯಿಸಿದ್ದು ಆಕೆಗೆ ಇಷ್ಟವಾಗಿರಲಿಲ್ಲ. ಮನನೊಂದು ಕಾಲೇಜ್ ಹಾಸ್ಟೆಲ್ ನಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.

ಆಕೆಯ ಕೊಠಡಿ ಬಾಗಿಲು ತೆರೆಯದೇ ಹೋದಾಗ ಅನುಮಾನಗೊಂಡ ಸಹಪಾಠಿಗಳು ಈ ವಿಚಾರವನ್ನು ವಾರ್ಡನ್ ಗಮನಕ್ಕೆ ತಂದಿದ್ದರು. ಬಾಗಿಲು ತೆರೆದು ನೋಡಿದಾಗ ವಿದ್ಯಾರ್ಥಿನಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾರ ಮುಡಿಗೆ?