Publish Date: Thu, 17 Feb 2022 (09:30 IST)
Updated Date: Thu, 17 Feb 2022 (09:35 IST)
ಗುರ್ಗಾಂವ್: ಸೆಲ್ಫೀ ತೆಗೆಯುವ ಹುಚ್ಚಿಗೆ ನಾಲ್ವರು ಯುವಕರು ರೈಲಿನಡಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಘಟನೆ ದೆಹಲಿ ಹೊರವಲಯದಲ್ಲಿ ನಡೆದಿದೆ.
ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಓವರ್ ಬ್ರಿಡ್ಜ್ ಬಳಿ ಯುವಕರು ಸೆಲ್ಫೀ ಕ್ಲಿಕ್ಕಿಸಲು ಹೊರಟಿದ್ದರು. ರೈಲು ಸಮೀಪ ಬಂದರೂ ಮತ್ತಷ್ಟು ಸುಂದರ ಚಿತ್ರ ತೆಗೆಯಬೇಕೆಂಬ ಹುಚ್ಚಿಗೆ ಬಿದ್ದು ಅಲ್ಲಿಯೇ ನಿಂತಿದ್ದರು. ಆದರೆ ವೇಗವಾಗಿ ಬಂದ ರೈಲು ನಾಲ್ವರಿಗೆ ಡಿಕ್ಕಿ ಹೊಡೆದು ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರೆಲ್ಲರೂ 18 ರಿಂದ 21 ವರ್ಷ ವಯಸ್ಸಿನವರು ಎನ್ನಲಾಗಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.