Webdunia - Bharat's app for daily news and videos

Install App

ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಮಲತಂದೆಗೆ 6 ವರ್ಷ ಕಠಿಣ ಶಿಕ್ಷೆ

Webdunia
ಬುಧವಾರ, 8 ನವೆಂಬರ್ 2023 (14:41 IST)
ಮಲತಂದೆಯಿಂದ ಲೈಂಗಿಕವಾಗಿ ಆಕ್ರಮಣಕ್ಕೊಳಗಾದ ಸಂದರ್ಭದಲ್ಲಿ ಯುವತಿ ಕೂಗಿಕೊಂಡಾಗ ಘಟನೆ ಬೆಳಕಿಗೆ ಬಂದಿತು. ಮಲಮಗಳ ಮೇಲೆ ಲೈಂಗಿಕ  ಶೋಷಣೆ ಮಾಡಿದ 45 ವರ್ಷದ ವ್ಯಕ್ತಿಯೊಬ್ಬನಿಗೆ ಮುಂಬೈನ ಸೆಷನ್ಸ್ ಕೋರ್ಟ್ 6 ವರ್ಷ ಕಾರಾಗೃಹವಾಸದ ಶಿಕ್ಷೆಯನ್ನು ನೀಡಿದೆ. 
 
ಪೀಡಿತಳ ತಂದೆಯ ಮರಣಾ ನಂತರ, ಆಕೆಯ ತಾಯಿ ಆರೋಪಿಯ ಜತೆ ಮರು ವಿವಾಹವಾದ ನಂತರ ಕುಟುಂಬ ಪಶ್ಚಿಮ ಮುಂಬೈನ ಮಾಹಿಮ್‌ಗೆ ವಾಸ್ತವ್ಯ ಬದಲಿಸಿತು. ನಂತರ  ಆರೋಪಿ ಈ ಕೃತ್ಯವನ್ನೆಸಗಿದ್ದಾನೆ .
 
ಘಟನೆಯನ್ನು ತಾಯಿಯ ಬಳಿ ಹೇಳಿಕೊಂಡಾಗ ಆಕೆ ಗಂಡನ ಬಳಿ ಈ ಕುರಿತು ಜಗಳವಾಡಿದ್ದಳು. ಆದರು ಕೂಡ ಹುಡುಗಿಗೆ ಲೈಂಗಿಕ ಹಿಂಸೆ ನೀಡುವುದನ್ನಾತ ಮುಂದುವರೆಸಿದ್ದ. ಹುಡುಗಿಯ ತಾಯಿ ಕ್ಷಯರೋಗ ಪೀಡಿತಳಾಗಿ ಫೆಬ್ರವರಿ ತಿಂಗಳಲ್ಲಿ ಮರಣವನ್ನಪ್ಪಿದ ನಂತರ ಆತ ತನ್ನ ದುಷ್ಕೃತ್ಯವನ್ನು ಮುಂದುವರೆಸಿದ್ದ. 
 
ಈ ವಿಷಯ ಪೀಡಿತಳ ತಾಯಿಯ ಸಹೋದರಿಯ ಗಮನಕ್ಕೆ ಬಂದಾಗ ಆಕೆ ಪೋಲಿಸರಲ್ಲಿ ದೂರು ದಾಖಲಿಸಿದಳು. ಆರೋಪಿಯ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಹಿತರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಾಯಿತು.
 
ವಿಚಾರಣೆ ಸಂದರ್ಭದಲ್ಲಿ ಹಲವಾರು ಸಾಕ್ಷಿಗಳನ್ನು ಪರೀಕ್ಷಿಸಿದ ನ್ಯಾಯಾಧೀಶರು ಆರೋಪಿಗೆ 6 ವರ್ಷಗಳ ಸಜೆಯನ್ನು ವಿಧಿಸಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ಈಗ ಚಾಮುಂಡಿಯನ್ನು ಒಪ್ಪುತ್ತಾರಾ: ಪ್ರತಾಪಸಿಂಹ ಪ್ರಶ್ನೆ

ಪಾರ್ಟಿ ವೇಳೆ ಬಹುಮಹಡಿ ಕಟ್ಟಡ ಕುಸಿತ: ಅವಶೇಷಗಳ ಅಡಿಯಲ್ಲಿ 15ರಿಂದ 20 ಮಂದಿ ಸಿಲುಕಿರುವ ಶಂಕೆ

ರಾಜಣ್ಣ ಹೇಳಿಕೆ ಮಾತ್ರವಲ್ಲ ಡಿಕೆಶಿ ಆರ್‌ಎಸ್‌ಎಸ್‌ ಗೀತೆಯೂ ಹೈಕಮಾಂಡ್‌ ತಲುಪಲಿ ಎಂದ ಜಾರಕಿಹೊಳಿ

ತಾರಕಕ್ಕೇರಿದ ಸುಂಕ ಸಮರ: ದೊಡ್ಡಣ್ಣ ನಾಲ್ಕು ಬಾರಿ ಕರೆಮಾಡಿದರೂ ಕ್ಯಾರೇ ಎನ್ನದ ನರೇಂದ್ರ ಮೋದಿ

ಚಾಮುಂಡಿ ಬೆಟ್ಟಕ್ಕೆ ಜಾತ್ಯತೀತ ಪಟ್ಟಿ ಬೇಡ: ಡಿಕೆಶಿಗೆ ಸಂಸದ ಯದುವೀರ್ ಒಡೆಯರ್‌ ಕೌಂಟರ್‌

ಮುಂದಿನ ಸುದ್ದಿ