Select Your Language

Notifications

webdunia
webdunia
webdunia
webdunia

ವಿವಾಹವಾಗುವ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರವೆಸಗಿದ ಆರೋಪಿ ಅರೆಸ್ಟ್

ವಿವಾಹವಾಗುವ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರವೆಸಗಿದ ಆರೋಪಿ ಅರೆಸ್ಟ್
delhi , ಬುಧವಾರ, 8 ನವೆಂಬರ್ 2023 (14:07 IST)
ತಂಪು ಪಾನೀಯದಲ್ಲಿ ಮತ್ತು ಬರಿಸುವು ಔಷಧಿ ನೀಡಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ. ಪ್ರಜ್ಞೆ ಮರಳಿದಾಗ ತಾನು ಅತ್ಯಾಚಾರಕ್ಕೊಳಗಾಗಿರುವುದು ತಿಳಿದು ಆರೋಪಿಯ ಮೇಲೆ ಯುವತಿ ಪೊಲೀಸ್ ಕೇಸ್ ದಾಖಲಿಸಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ವಿನೋದ್ ಕುಮಾರ್ ಯುವತಿಗೆ ಕಡಿಮೆ ಬಾಡಿಗೆ ದರದಲ್ಲಿ ಮನೆಯನ್ನು ನೀಡಿದ್ದರಿಂದ ಅಲ್ಲಿಯೇ ವಾಸಿಸುತ್ತಿದ್ದಳು. ಒಂದು ದಿನ  ಯುವತಿ ಬೆದರಿಸಿದ್ದರಿಂದ ಶೀಘ್ರದಲ್ಲಿಯೇ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿದ. ವಿವಾಹವಾಗುವ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರವೆಸಗಿದ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ.  
 
ಮನೆಯ ಮಾಲೀಕನೊಬ್ಬ ತನ್ನ ಮನೆಯಲ್ಲಿ ಬಾಡಿಗೆಗಿದ್ದ ಮಹಿಳೆಯ ಮೇಲೆ ಸತತ ಮೂರು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಲ್ಲದೇ ವೇಶ್ಯಾವಾಟಿಕೆಗೆ ತಳ್ಳಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 
 
ದಕ್ಷಿಣ ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ವಿನೋದ್ ಕುಮಾರ್ ವಿರುದ್ಧ ಯುವತಿ ದೂರು ದಾಖಲಿಸಿದ ಕೂಡಲೇ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.  
 
ಉತ್ತರಪ್ರದೇಶದ ಮಥುರಾ ಜಿಲ್ಲೆಯ ಮೂಲದವಳಾದ ಯುವತಿ ನಾಲ್ಕು ವರ್ಷಗಳ ಹಿಂದೆ ಉದ್ಯೋಗವನ್ನು ಅರಿಸಿ ದೆಹಲಿಗೆ ಬಂದಿದ್ದಳು. ಆಕೆಯ ಗೆಳತಿಯೊಬ್ಬಳು ರಿಯಲ್ ಎಸ್ಟೇಟ್ ಉದ್ಯಮಿ ವಿನೋದ್ ಕುಮಾರ್‌ನನ್ನು ಯುವತಿಗೆ ಪರಿಚಯಿಸಿದ್ದಳು
 
ಏತನ್ಮಧ್ಯೆ, ಆರೋಪಿ ವಿನೋದ್ ಕುಮಾರ್ ಯುವತಿಗೆ ನಗ್ನಾವಸ್ಥೆಯಲ್ಲಿರುವ ಮತ್ತು ಆಕೆಯ ಮೇಲೆ ಹಲ್ಲೆ ಮಾಡುತ್ತಿರುವ ಎರಡು ಎಂಎಂಎಸ್‌ಗಳನ್ನು ಕಳುಹಿಸಿ ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ. ಕಳೆದ ವರ್ಷ ವೇಶ್ಯಾವಾಟಿಕೆಗೆ ತಳ್ಳಿದ್ದಲ್ಲದೇ ಬಂದ ಹಣವನ್ನು ಲಪಟಾಯಿಸಿದ ಎಂದು ಯುವತಿ ಆರೋಪಿಸಿದ್ದಾಳೆ.
 
ಕೊನೆಗೂ ಒಂದು ದಿನ ಯುವತಿ ತನ್ನ ಗೆಳತಿಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದಳು. ಗ್ರಾಹಕರಂತೆ ನಟಿಸಿ ಬಂದ ಇಬ್ಬರು ಯುವಕರು ಆಕೆಯನ್ನು ಬಂಧನದಿಂದ ಮುಕ್ತಗೊಳಿಸಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಆರೋಪಿ ವಿನೋದ್ ಕುಮಾರ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ ನಲ್ಲಿ ಪಟಾಕಿ ಕೊಂಡೊಯ್ಯುವ ಮುನ್ನ ಹುಷಾರ್..!