Select Your Language

Notifications

webdunia
webdunia
webdunia
webdunia

ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ ನಲ್ಲಿ ಪಟಾಕಿ ಕೊಂಡೊಯ್ಯುವ ಮುನ್ನ ಹುಷಾರ್..!

ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ ನಲ್ಲಿ ಪಟಾಕಿ ಕೊಂಡೊಯ್ಯುವ ಮುನ್ನ ಹುಷಾರ್..!
bangalore , ಬುಧವಾರ, 8 ನವೆಂಬರ್ 2023 (14:00 IST)
ಅತ್ತಿಬೆಲೆ ಪಟಾಕಿ ದುರಂತ ಬೆನ್ನಲ್ಲೆ ಸಾರಿಗೆ ಇಲಾಖೆ  ಅಲರ್ಟ್ ಆಗಿದೆ.ಖಾಸಗಿ ಬಸ್ ಗಳಲ್ಲಿ ಅಪ್ಪಿತಪ್ಪಿ ಪಟಾಕಿ  ಕೊಂಡೊಯ್ಯುವಾಗ ತಗಲಾಕಿಕೊಂಡ್ರೆ ಶಿಕ್ಷೆ ಖಚಿತ.ಪಟಾಕಿ ದುರಂತದಿಂದ ಎಚ್ಚೆತ್ತ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ.ಬಸ್ ಚಾಲಕ, ಮಾಲೀಕರ ಜೊತೆ ಪ್ರಯಾಣಿಕನ ವಿರುದ್ಧವು ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.ಬಸ್‌ ಸೇರಿದಂತೆ ಗೂಡ್ಸ್ ವಾಹನಗಳಲ್ಲೂ ಪಟಾಕಿ ಸಾಗಣೆ ಅಕ್ರಮವಾಗಿದ್ದುರೂಲ್ಸ್ ಬ್ರೇಕ್ ಮಾಡಿದ್ರೆ ವಾಹನದ ನೊಂದಣಿಯೇ ರದ್ದುಮಾಡುವ ಎಚ್ಚರಿಕೆ ಸಾರಿಗೆ ಇಲಾಖೆ ನೀಡಿದೆ.
 
ಗೂಡ್ಸ್ ವಾಹನಗಳಲ್ಲಿ ಪಟಾಕಿ ಸಾಗಣೆ ಮಾಡಬೇಕಾದ್ರೆ ಸಾರಿಗೆ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಒಪ್ಪಿಗೆ ಪತ್ರ  ಕಡ್ಡಾಯವಾಗಿದ್ದು,ಪರ್ಮೀಷನ್ ಜೊತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.ಅಪ್ಪಿ ತಪ್ಪಿ ಖಾಸಗಿ ಸಾರಿಗೆ ಬಸ್ ಗಳಲ್ಲಿ ಪಟಾಕಿ ಸಾಗಿಸಿ ಸಿಕ್ಕಿಬಿದ್ರೆ ಕಠಿಣ ಕ್ರಮ ಎದುರಿಸಬೇಕಾಗುತ್ತೆ.೫ರಿಂದ ೧೦ಸಾವಿರ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಹ್ಲಾದ ವಿಷಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ- ತುಷಾರ್ ಗಿರಿನಾಥ್