Webdunia - Bharat's app for daily news and videos

Install App

ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಸಹಾಯ ಮಾಡುವ ಗ್ರೂಪ್ ಜೊತೆ ಸೋನಿಯಾ ಗಾಂಧಿಗೆ ಲಿಂಕ್

Krishnaveni K
ಸೋಮವಾರ, 9 ಡಿಸೆಂಬರ್ 2024 (12:10 IST)
ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಗ್ರೂಪ್ ಗೆ ಫಂಡ್ ಒದಗಿಸುವ ಜಾರ್ಜ್ ಸೊರೇಸ್ ಫೌಂಡೇಷನ್ ಜೊತೆಗೆ ಸಂಬಂಧ ಹೊಂದಿರುವ ಫೌಂಡೇಷನ್ ಒಂದಕ್ಕೆ ಸೋನಿಯಾ ಗಾಂಧಿ ಉಪಾಧ್ಯಕ್ಷೆಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮಾಡಿದೆ.

ಮೊನ್ನೆಯಷ್ಟೇ ರಾಹುಲ್ ಗಾಂಧಿಗೆ ಭಾರತ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಜೋರ್ಜ್ ಸೊರೇಸ್ ಸಂಸ್ಥೆ ಜೊತೆ ನಂಟು ಕಲ್ಪಿಸಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಈಗ ಸೋನಿಯಾ ಗಾಂಧಿಗೂ ಈ ಸಂಸ್ಥೆ ಜೊತೆ ನಂಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಜಾರ್ಜ್ ಸೊರೇಸ್ ಅಮೆರಿಕನ್ ಉದ್ಯಮಿಯಾಗಿದ್ದಾರೆ. ಇಂತಹ ಸಂಸ್ಥೆ ಮತ್ತು ವ್ಯಕ್ತಿಗಳೊಂದಿಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಂಟಿದ್ದು, ಆ ಮೂಲಕ ದೇಶ ವಿರೋಧಿಗಳೊಂದಿಗೆ ವಿಪಕ್ಷ ನಾಯಕರು ಕೈ ಜೋಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ನಾಯಕರ ಮೂಲಕ ಈ ಸಂಸ್ಥೆಗಳು ಭಾರತ ವಿರೋಧಿ ಚಟುವಟಿಕೆಗಳಿಗೆ ಕೈ ಜೋಡಿಸುತ್ತಿದೆ ಎಂಬುದು ಬಿಜೆಪಿ ಆರೋಪವಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ರಾಹುಲ್ ಗಾಂಧಿಗೆ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಫಾರಂ ಆಫ್ ಡೆಮಾಕ್ರಾಟಿಕ್ ಲೀಡರ್ಸ್ ಇನ್ ಏಷ್ಯಾ ಪೆಸಿಫಿಕ್ ಎನ್ನುವ ಫೌಂಡೇಷನ್ ಗೆ ಸೋನಿಯಾ ಉಪಾಧ್ಯಕ್ಷೆ. ಈ ಸಂಸ್ಥೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ನೋಡಬೇಕು ಎಂದು ಈ ಹಿಂದೆ ಹೇಳಿತ್ತು. ಈ ಸಂಸ್ಥೆಗೆ ಜಾರ್ಜ್ ಸೊರೇಸ್ ಫಂಡ್ ಮಾಡುವ ಸಂಸ್ಥೆಯೊಂದಿಗೆ ನಂಟಿದೆ ಎಂದು ಆರೋಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments