Select Your Language

Notifications

webdunia
webdunia
webdunia
webdunia

Rahul Gandhi: ನನ್ನ ಅಣ್ಣನಿಗೆ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ: ಪ್ರಿಯಾಂಕ ಗಾಂಧಿ ವಾದ್ರಾ

Priyanka Vadra-Rahul Gandhi

Krishnaveni K

ನವದೆಹಲಿ , ಶುಕ್ರವಾರ, 6 ಡಿಸೆಂಬರ್ 2024 (15:18 IST)
ನವದೆಹಲಿ: ರಾಹುಲ್ ಗಾಂಧಿ ಒಬ್ಬ ದೇಶದ್ರೋಹಿ ಎಂದ ಬಿಜೆಪಿ ನಾಯಕರಿಗೆ ಸಹೋದರಿ, ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ತಿರುಗೇಟು ನೀಡಿದ್ದಾರೆ. ನನ್ನ ಅಣ್ಣನಿಗೆ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದಿದ್ದಾರೆ.

ಗೌತಮ್ ಅದಾನಿ ವಿಚಾರದಲ್ಲಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸುತ್ತಿರುವ ವಿಪಕ್ಷಗಳಿಗೆ ಟಾಂಗ್ ಕೊಡುವಾಗ ಸಂಬಿತ್ ಪಾತ್ರಾ, ರಾಹುಲ್ ಗಾಂಧಿಗೆ ಶತಕೋಟ್ಯಾಧೀಶ ಜಾರ್ಜ್ ಸೊರೊಸ್ ನಂಟು ಹೊಂದಿರುವ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ರಿಪೋರ್ಟಿಂಗ್ ಪ್ರಾಜೆಕ್ಟ್ ಪ್ರಕಟಿಸಿದ ವರದಿ ಆಧಾರದ ಮೇಲೆ ವಿಪಕ್ಷಗಳು ಸಂಸತ್ ಕಲಾಪವನ್ನು ಹಾಳುಮಾಡುತ್ತಿವೆ ಎಂದಿದ್ದರು. ಈ ಗದ್ದಲದ ವೇಳೆ ರಾಹುಲ್ ಒಬ್ಬ ದೇಶದ್ರೋಹಿ ಎಂದು ಬಿಜೆಪಿ ಆರೋಪಿಸಿತ್ತು.

ಇದೀಗ ತನ್ನ ಅಣ್ಣನ ಮೇಲೆ ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರಿಯಾಂಕ ತಿರುಗೇಟು ನೀಡಿದ್ದಾರೆ. ‘ರಾಹುಲ್ ಗಾಂಧಿಗೆ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ 13 ವರ್ಷ ಜೈಲಿನಲ್ಲಿ ಕಳೆದ ಜವಹರ್ ಲಾಲ್ ನೆಹರೂವನ್ನು ದೇಶದ್ರೋಹಿ ಎಂದವರಿಗೆ, ಎರಡು ಯುದ್ಧಗಳಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಧೀರೆ ಇಂದಿರಾ ಗಾಂಧಿಯನ್ನು ದೇಶದ್ರೋಹಿ ಎನ್ನುವವರಿಗೆ, ಈ ದೇಶಕ್ಕಾಗಿ ಪ್ರಾಣ ತೆತ್ತ ರಾಜೀವ್ ಗಾಂಧಿಯವರನ್ನು ದೇಶದ್ರೋಹಿ ಎಂದವರು ಈಗ ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎನ್ನುವುದರಲ್ಲಿ ಹೊಸತೇನೂ ಇಲ್ಲ. ನನಗೆ ನನ್ನ ಅಣ್ಣನ ಬಗ್ಗೆ ಹೆಮ್ಮೆಯಿದೆ. ಆತನಿಗೆ ಈ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಬಿಜೆಪಿಯವರಿಗೆ ಅದಾನಿ ವಿಚಾರವನ್ನು ಸಂಸತ್ತಿನಲ್ಲಿ ಮಾತನಾಡುವ ತಾಕತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ನಡೆಯಬಹುದಾದ ಯಾವುದೇ ಚರ್ಚೆಗಳಲ್ಲಿ ಭಾಗಿಯಾಗಲು ಅವರಿಗೆ ಭಯವಿದೆ’ ಎಂದು ಪ್ರಿಯಾಂಕ ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಒಬ್ಬ ಮಹಾನ್ ದೇಶ ಭಕ್ತ ಅರ್ಥ ಆಯ್ತಾ ಅಂದ್ರು ಸಿಎಂ ಸಿದ್ದರಾಮಯ್ಯ