Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಒಬ್ಬ ಮಹಾನ್ ದೇಶ ಭಕ್ತ ಅರ್ಥ ಆಯ್ತಾ ಅಂದ್ರು ಸಿಎಂ ಸಿದ್ದರಾಮಯ್ಯ

Rahul Gandhi-Siddaramaiah-Priyanka Gandhi

Krishnaveni K

ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2024 (15:06 IST)
ಬೆಂಗಳೂರು: ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದ ಬಿಜೆಪಿಗೆ ಇಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಮಹಾನ್ ದೇಶಭಕ್ತ ಎಂದಿದ್ದಾರೆ.

ರಾಹುಲ್ ಗಾಂಧಿ ವಿದೇಶೀ ಶಕ್ತಿಗಳೊಂದಿಗೆ ಕೈ ಜೋಡಿಸಿಕೊಂಡು ದೇಶದ್ರೋಹಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಶಶಿಕಾಂತ್ ದುಬೆ ಆರೋಪಿಸಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಕಾಂಗ್ರೆಸ್ ಭಾರೀ ಆಕ್ರೋಶ ಹೊರಹಾಕಿತ್ತು. ಇದೀಗ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‘ರಾಹುಲ್ ಗಾಂದಿ ಒಬ್ಬ ಮಹಾನ್ ದೇಶ ಭಕ್ತ ಅರ್ಥ ಆಯ್ತಾ? ಅವರು ಎಲ್ಲರಿಗೂ ಸಮಾನತೆ ಅವಕಾಶಗಳು ಸಿಗಬೇಕು ಎಂದು ಹೋರಾಟ ಮಾಡ್ತಿದ್ದಾರೆ. ಸಂವಿಧಾನದ ರಕ್ಷಣೆಯಾಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ರಕ್ಷಣೆಯಾಗಬೇಕು ಎಂದು ಹೋರಾಟ ಮಾಡುತ್ತಿರುವ ವ್ಯಕ್ತಿ. ಅಂತಹ ವ್ಯಕ್ತಿಯನ್ನು ದೇಶದ್ರೋಹಿ ಎಂದು ಕರೆದರೆ ಯಾರು ಹಾಗೆ ಹೇಳುತ್ತಾರೋ ಅವರೇ ನಿಜವಾದ ದೇಶದ್ರೋಹಿಗಳು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗೌತಮ್ ಅದಾನಿ ವಿಚಾರದಲ್ಲಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸುತ್ತಿರುವ ವಿಪಕ್ಷಗಳಿಗೆ ಟಾಂಗ್ ಕೊಡುವಾಗ ಸಂಬಿತ್ ಪಾತ್ರಾ, ರಾಹುಲ್ ಗಾಂಧಿಗೆ ಶತಕೋಟ್ಯಾಧೀಶ ಜಾರ್ಜ್ ಸೊರೊಸ್ ನಂಟು ಹೊಂದಿರುವ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ರಿಪೋರ್ಟಿಂಗ್ ಪ್ರಾಜೆಕ್ಟ್ ಪ್ರಕಟಿಸಿದ ವರದಿ ಆಧಾರದ ಮೇಲೆ ವಿಪಕ್ಷಗಳು ಸಂಸತ್ ಕಲಾಪವನ್ನು ಹಾಳುಮಾಡುತ್ತಿವೆ ಎಂದಿದ್ದರು. ಈ ಗದ್ದಲದ ವೇಳೆ ರಾಹುಲ್ ಒಬ್ಬ ದೇಶದ್ರೋಹಿ ಎಂದು ಬಿಜೆಪಿ ಆರೋಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬೇಡ್ಕರ್ ಗೆ ನಿಜವಾದ ಗೌರವ ಸಲ್ಲಿಸಿದ್ದು ಮೋದಿಜೀ, ಕಾಂಗ್ರೆಸ್ ಮಸಿ ಬಳಿದಿತ್ತು: ವಿಜಯೇಂದ್ರ