Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ಅತ್ತೆ-ಮಾವನನ್ನೇ ಕೊಂದ ಅಳಿಯ

ಆಸ್ತಿಗಾಗಿ ಅತ್ತೆ-ಮಾವನನ್ನೇ ಕೊಂದ ಅಳಿಯ
ನಾಗ್ಪುರ , ಬುಧವಾರ, 29 ಜೂನ್ 2022 (09:00 IST)
ನಾಗ್ಪುರ: ಆಸ್ತಿ ವಿಚಾರಕ್ಕೆ ಗಲಾಟೆಯಾಗಿ ಅಳಿಯ ಮಹಾಶಯ ಅತ್ತೆ-ಮಾವನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

2013 ರಲ್ಲಿ ಈತನಿಗೆ ಮದುವೆಯಾಗಿತ್ತು. ಇಬ್ಬರು ಮಕ್ಕಳೂ ಇದ್ದಾರೆ. ಮಾವನ ಬಳಿಯಿದ್ದ ದುಡ್ಡು, ಆಸ್ತಿಗಾಗಿ ಅಳಿಯ ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಅತ್ತೆ-ಮಾವ, ಪತ್ನಿ ಹಾಗೂ ಮಗಳ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದಾನೆ. ಈ ವೇಳೆ ವೃದ್ಧ ಅತ್ತೆ-ಮಾವ ತೀರಿಕೊಂಡಿದ್ದು, ಪತ್ನಿ, ಮಗಳಿಗೆ ತೀವ್ರ ಗಾಯಗಳಾಗಿವೆ.

ಇನ್ನೊಬ್ಬ ಮಗ ಮತ್ತೊಂದು ರೂಂನಲ್ಲಿ ಮಲಗಿದ್ದ ಕಾರಣ ಬಚಾವ್ ಆಗಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಕಿ ಕಣ್ಗಾವಲಿನಲ್ಲಿ ಬಕ್ರೀದ್ ಆಚರಣೆ