Publish Date: Mon, 27 Jun 2022 (10:20 IST)
Updated Date: Mon, 27 Jun 2022 (10:31 IST)
ಡೆಹ್ರಾಡೂನ್: ಲಿಫ್ಟ್ ನೆಪದಲ್ಲಿ ತಾಯಿ ಮತ್ತು ಆಕೆಯ 6 ವರ್ಷದ ಮಗಳನ್ನು ಕಾರಿನಲ್ಲಿ ಕೂರಿಸಿಕೊಂಡ ದುರುಳರು ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ.
ಮುಸ್ಲಿ ಧಾರ್ಮಿಕ ಕ್ಷೇತ್ರಕ್ಕೆ ತೆರಳಿ ವಾಪಸಾಗುತ್ತಿದ್ದಾಗ ತಾಯಿ, ಮಗಳು ಕಾರಿನಲ್ಲಿ ಲಿಫ್ಟ್ ಕೇಳಿದ್ದಾರೆ. ಅದಾಗಲೇ ಕಾರಿನಲ್ಲಿ ಚಾಲಕ ಮಾತ್ರವಲ್ಲದೆ, ಆತನ ಕೆಲವು ಸಹಚರರೂ ಇದ್ದರು.
ಅರ್ಧ ದಾರಿಯಲ್ಲಿ ಇಬ್ಬರ ಮೇಲೆ ಅತ್ಯಾಚಾರವೆಸಗಿದ ಕಾಮುಕರು ಬಳಿಕ ದಾರಿಯಲ್ಲೇ ಇಬ್ಬರನ್ನೂ ಹೊರ ತಳ್ಳಿ ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.