Select Your Language

Notifications

webdunia
webdunia
webdunia
webdunia

ನೈಟ್‍ಕ್ಲಬ್‍ನಲ್ಲಿ ಯುವಕರ ನಿಗೂಢ ಸಾವು!

ನೈಟ್‍ಕ್ಲಬ್‍ನಲ್ಲಿ ಯುವಕರ ನಿಗೂಢ ಸಾವು!
ಲಂಡನ್ , ಸೋಮವಾರ, 27 ಜೂನ್ 2022 (10:09 IST)
ಜೋಹಾನ್ಸ್ಬರ್ಗ್ : ದಕ್ಷಿಣ ಆಫ್ರಿಕಾದ ಕರಾವಳಿ ಪಟ್ಟಣದ ಪೂರ್ವ ಲಂಡನ್ನಲ್ಲಿರುವ ನೈಟ್ಕ್ಲಬ್ನಲ್ಲಿ 20 ಯುವಕರು ಮೃತಪಟ್ಟಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಚಳಿಗಾಲದ ಶಾಲಾ ಪರೀಕ್ಷೆ ಮುಕ್ತಾಯವಾಗಿದ್ದ ಹಿನ್ನೆಲೆ ಯುವಕರು ಪಾರ್ಟಿ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದಕ್ಕೆ ಪೂರ್ವ ಲಂಡನ್ನಲ್ಲಿರುವ ನೈಟ್ಕ್ಲಬ್ನಲ್ಲಿ ಪಾರ್ಟಿಗೆ ಎಲ್ಲ ಯುವಕರು ಪಾಲ್ಗೊಂಡಿದ್ದರು.

ಆದರೆ ಬೆಳಗ್ಗೆಯಾಗುವಷ್ಟರಲ್ಲಿ ಎಲ್ಲರು ಮಸಣದ ಬಾಗಿಲನ್ನು ತಟ್ಟಿದ್ದಾರೆ. ಆದರೆ ಇವರ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. 

ಸ್ಥಳೀಯ ವರದಿಗಳ ಪ್ರಕಾರ, ಮೃತದೇಹಗಳ ಮೇಲೆ ಯಾವುದೇ ರೀತಿಯ ಗಾಯಗಳು ಗೋಚರವಾಗಿಲ್ಲ. ಕ್ಲಬ್ನಲ್ಲಿದ್ದ ಟೇಬಲ್ಗಳು ಮತ್ತು ಕುರ್ಚಿಗಳು ಅಲ್ಲಲ್ಲಿ ಹರಡಿಕೊಂಡಿವೆ. ಪ್ರಸ್ತುತ ಸಾವಿನ ಕಾರಣವೇನು ಎಂದು ದೃಢೀಕರಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ವಕ್ತಾರ ತಿಳಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾಗೆ ತಾಲಿಬಾನ್ ಬೇಡಿಕೆ ಏನು?