Select Your Language

Notifications

webdunia
webdunia
webdunia
webdunia

ನೈಟ್‌ ಕ್ಲಬ್‌ ನಲ್ಲಿ ರಾಹುಲ್‌ ಗಾಂಧಿ: ಪಾರ್ಟಿ ಮುಗೀತಾ ಅಂತ ಬಿಜೆಪಿ ಟಾಂಗ್!‌

rahul gandhi congress nigh club ನೈಟ್‌ ಕ್ಲಬ್‌ ರಾಹುಲ್‌ ಗಾಂಧಿ ಕಾಂಗ್ರೆಸ್
bengaluru , ಮಂಗಳವಾರ, 3 ಮೇ 2022 (16:30 IST)
ನೇಪಾಳದ ಕಠ್ಮಂಡು ನೈಟ್‌ ಕ್ಲಬ್‌ ನಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪಾರ್ಟಿ ಮಾಡುತ್ತಿರುವ ವೀಡಿಯೊ ವೈರಲ್‌ ಆಗಿದ್ದು, ಪಾರ್ಟಿ ಮುಗಿತಾ ಅಂತ ಬಿಜೆಪಿ ಟಾಂಗ್‌ ಕೊಟ್ಟಿದೆ.
ಬಿಜೆಪಿ ಐಟಿ ಮುಖ್ಯಸ್ಥ ಅಮಿತ್‌ ಮಾಲ್ವಿಯಾ ರಾಹುಲ್‌ ಗಾಂಧಿ ನೈಟ್‌ ಕ್ಲಬ್‌ ನಲ್ಲಿ ಪಾರ್ಟಿ ಮಾಡುತ್ತಿರುವ ವೀಡಿಯೊ ಟ್ವೀಟ್‌ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮುಂಬೈ ಬಂದ್‌ ಆಗಿದ್ದ ದಿನ ರಾಹುಲ್‌ ಗಾಂಧಿ ವಿದೇಶದಲ್ಲಿ ಪಾರ್ಟಿ ಮಾಡುತ್ತಿದ್ದರು. ಅವರ ಪಕ್ಷದ ಬಂಡವಾಳ ಹೊರಗೆ ಹಾಕುತ್ತಿರಬೇಕಾದರೆ ರಾಹುಲ್‌ ಗಾಂಧಿ ಪಾರ್ಟಿ ಮಾಡುತ್ತಿದ್ದರು. ಪ್ರಧಾನಿ ಅಭ್ಯರ್ಥಿಯೊಬ್ಬರು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗಿದೆ.
ರಾತ್ರಿ ಪಾರ್ಟಿಯಲ್ಲಿ ಜೋರಾಗಿ ಶಬ್ಧ ಕೇಳಿ ಬರುತ್ತಿದ್ದು, ಯುವತಿಯೊಂದಿಗೆ ಇದ್ದ ರಾಹುಲ್‌ ಗಾಂಧಿ ಸಂಭಾಷಣೆ ನಡೆಸುತ್ತಿರುವ ವೀಡಿಯೊ ಇದಾಗಿದೆ.
ರಾಹುಲ್‌ ಗಾಂಧಿ ತಮ್ಮ ಪತ್ರಕರ್ತ ಮಿತ್ರ ಸುಮ್ನಿನಾ ಉದಾಸ್‌ ಅವರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೋಮವಾರ ನೇಪಾಳಕ್ಕೆ ತೆರಳಿದ್ದು, ಕಠ್ಮಂಡುವಿನ ಜನಪ್ರಿಯ ನೈಟ್‌ ಕ್ಲಬ್‌ ನಲ್ಲಿ ಪಾರ್ಟಿ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೆರಡು ದಿನದಲ್ಲಿ ಸಂಪುಟ ವಿಸ್ತರಣೆ ಖಚಿತ: ಬಿಎಸ್‌ ಯಡಿಯೂರಪ್ಪ