Select Your Language

Notifications

webdunia
webdunia
webdunia
webdunia

ಹಲಸಿನ ಸಿಪ್ಪೆ ಕೇರಳದಿಂದ ಲಂಡನ್ಗೆ ರಫ್ತು!

ಹಲಸಿನ ಸಿಪ್ಪೆ ಕೇರಳದಿಂದ ಲಂಡನ್ಗೆ ರಫ್ತು!
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2022 (14:42 IST)
ಕೇರಳ :  ಭಾರತದಿಂದ ಹಣ್ಣುಗಳಿಗೆ ವಿದೇಶಗಳಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ.

ರಾಸಾಯನಿಕ ಸಂಪಡಿಸದೆ, ಅತ್ಯುತ್ತಮ ಗುಣಮಟ್ಟದ ಹಣ್ಣು ಇದೀಗ ವಿದೇಶಗಳಿಗೆ ರಫ್ತಾಗುತ್ತಿದೆ. ಈಗಾಗಲೇ ಭಾರತದ ರಸಭರಿತ ಮಾವಿನ ಹಣ್ಣು ಹಲವು ದೇಶದ ಜನರ ಮನ ತಣಿಸಿದೆ.

ಇದೀಗ ಹಸಲಿನ ಹಣ್ಣಿನ ಸರದಿ ಕೇರಳದ ಇಡುಕ್ಕಿಯಿಂದ ಲಂಡನ್ಗೆ ಸಿಪ್ಪೆ ಸುಲಿದ ಹಲಸಿನ ಹಣ್ಣನ್ನು ರಫ್ತು ಮಾಡಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ತೋಟಗಾರಿಕೆ ಮಿಷನ್ ನೆರವಿನಿಂದ ರೈತರು ಮಹತ್ವದ ಸಾಧನೆ ಮಾಡಿದ್ದಾರೆ.

ಇಡುಕ್ಕಿಯಿಂದ ಹಸಲು ರಫ್ತಿಗೆ ಫ್ಲ್ಯಾಗ್ ಆಫ್ ಮಾಡಲಾಗಿದೆ. ಲಂಡನ್ಗೆ ರಫ್ತಾದ ಹಲಸಿನ ಹಣ್ಣುಗಳನ್ನು ಆಮದುದಾರರ ಮಾನದಂಡಗಳಿಗೆ ಅನುಗುಣವಾಗಿ ಪೂರೈಸಲಾಗಿದೆ. ಸಿಪ್ಪಿ ಸುಲಿದ ಹಲಸಿನ ಹಣ್ಣುಗಳನ್ನು ನೈರ್ಮಲ್ಯದ ಪರಿಸರದಲ್ಲಿ ಅತ್ಯಂತ ಕಾಳಜಿಯಿಂದ ಸಿಪ್ಪೆ ತೆಗದು ಪ್ಯಾಕ್ ಮಾಡಲಾಗಿದೆ.

ಈ ಪ್ಯಾಕ್ ಮಾಡಿದ ಹಲಸಿನ ಹಣ್ಣುಗಳು 12 ರಿಂದ 14 ದಿನ ವ್ಯಾಲಿಡಿಟಿ ಹೊಂದಿದೆ. ಭಾರತದಲ್ಲಿ ಹಲಸನ್ನು ಮಾಂಸಕ್ಕೆ ಪರ್ಯಾಯ ಎಂದೇ ಕರೆಯುತ್ತಾರೆ. ಪ್ರೋಟಿನ್ ಅಂಶ ಹೆಚ್ಚಿರುವ ಸಸ್ಯಾಹಾರ ಆಹಾರ ಇದಾಗಿದೆ. ಭಾರತದ ಪಶ್ಚಿಮ ಘಟ್ಟಗಳಲ್ಲಿ ಹಲಸು ಯಥೇಚ್ಚವಾಗಿ ಕಾಣಸಿಗುತ್ತದೆ. 

ಕೇರಳದ ಅಧಿಕೃತ ಹಣ್ಣು ಪೌಷ್ಟಿಕಾಂಶದ ಪ್ರಯೋಜನ ಹೊಂದಿದೆ. ಹಲಸಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ವಿಟಮಿನ್ಗಳು, ಖನಿಜಗಳು ಮತ್ತು ಫೈಟೊಕೆಮಿಕಲ್ಗಳು ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಸಾ ಬಂದ್ : ಭಾರತೀಯ ವಿದ್ಯಾರ್ಥಿಗಳಿಗೆ ಬನ್ನಿ ಎಂದ ಚೀನಾ!