Select Your Language

Notifications

webdunia
webdunia
webdunia
webdunia

ಭಕ್ತರಿಗೆ ಮಾನಸಿಕ ನೆಮ್ಮದಿ ತರುವ ಸೀತಾರಾಮ ಆಧ್ಯಾತ್ಮಿಕ ಬ್ಯಾಂಕ್...!

ಅಯೋಧ್ಯೆ

geetha

ಅಯೋಧ್ಯೆ , ಗುರುವಾರ, 22 ಫೆಬ್ರವರಿ 2024 (20:00 IST)
ಅಯೋಧ್ಯೆ-ಒಂದAತೂ ಸತ್ಯ ರಾಮಜನ್ಮಭೂಮಿ ಅಯೋಧ್ಯೆಯೂ ರಾಮನ ಮಂದಿರ ನಿರ್ಮಾಣದ ಬಳಿಕ ಬಹು ದೊಡ್ಡ ಹಿರಿಮೆಯನ್ನು ಪಡೆದುಕೊಳ್ಳಲಿದೆ.. ಈಗಾಗಲೇ ಭವಿಷ್ಯದಲ್ಲಿ ರಾಮನೂರು ಶ್ರೀಮಂತ ವೈಭವವನ್ನು ಕಣ್ಣು ತುಂಬಿಕೊಳ್ಳಲಿದೆ ಅನ್ನೋದರ ಹಿಂಟ್ ಸಿಕ್ಕಾಗಿದೆ.. ಅದೊಂದು ಸರ್ವೇಯ ಪ್ರಕಾರ ಅತಿ ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿ ಅಯೋಧ್ಯೆಯೂ ಮೋಡಿ ಮಾಡಲಿದೆ ಅನ್ನೋದು ಬೇಜಾನ್ ಸದ್ದು ಮಾಡಿದ್ದಾಗಿದೆ..
 
ಅದೇ ರೀತಿಯಾಗಿ ಇದೀಗ ಅಯೋಧ್ಯೆಯಲ್ಲಿ ಇನ್ನೊಂದು ಬಹಳ ವಿಶೇಷವಾದ ಸನ್ನಿವೇಶ ಮುನ್ನಲೆಗೆ ಬಂದಿದೆ... ಆದ್ರೆ ಇದರ ಬಗ್ಗೆ ಈ ರಾಮಮಂದಿರ ಲೋಕಾರ್ಪಣೆ ಆಗುವರೆಗೂ ದೇಶದ ಬಹುತೇಕ ಮಂದಿಗೆ ಅಯೋಧ್ಯೆಯಲ್ಲಿ ಇಂತಹದೊAದು ವಿಶೇಷವಾದ ಆಧ್ಯಾತ್ಮಿಕ ಸಮ್ಮಿಲನ ಆಗ್ತಾ ಬಂದಿದೆ ಅನ್ನೋದರ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ...!
 
ಹೌದು... ಅಯೋಧ್ಯೆಯಲ್ಲಿ ಬಾಲರಾಮನ ಪ್ರವೇಶ ಆದ ಬಳಿಕ ಇಡೀ ಅಯೋಧ್ಯೆಯೇ ಮಿರ ಮಿರ ಅಂತ ಮಿಂಚುತ್ತಿದೆ... ಒಂದು ರೀತಿಯಲ್ಲಿ ರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಹೊಸ ಕಳೆ ಬಂದು ಬಿಟ್ಟಿದೆ....
 
ಶ್ರೀ ರಾಮ ಅಂದ್ರೆ ಮೊದಲು ನೆನಪಾಗೋದೇ ಪರಮ ಪವಿತ್ರವಾದ ಪುಣ್ಯ ಭೂಮಿ ಅಯೋಧ್ಯೆ... ಅಯೋಧ್ಯೆ ಅಂದ ಮೇಲೆ ಈ ನೆಲದಲ್ಲಿ ಶ್ರೀ ರಾಮನ ಜಪವೇ ಹೆಚ್ಚು ಮಾರ್ದನಿಸಬೇಕು... ಹಾಗೆ ನೋಡಿದರೆ ಬರೋಬ್ಬರಿ ೫೦೦ ವರ್ಷಗಳ ಸುದೀರ್ಘ ಅವಧಿಗೆ ಇಲ್ಲೊಂದು ಮಂದಿರ ನಿರ್ಮಾಣಕ್ಕಾಗಿ ನಡೆದ ಅವಿರತ ಹೋರಾಟ ನಿಜಕ್ಕೂ ರೋಮಾಂಚನ....
 
ಈಗ ಎಲ್ಲವೂ ಸುಖಾಂತ್ಯವಾಗಿದೆ.. ಬಾಲರಾಮನ ಆಗಮನ ಇಡೀ ಅಯೋಧ್ಯೆಗೆ ಹೊಸ ಮೆರುಗನ್ನ ನೀಡಿದೆ.... ಆದರೆ ಇಲ್ಲೊಂದು ವಿಶೇಷವಾದ ಆಕ್ಟಿವೀಟಿ ನಡೆಯುತ್ತಿದೆ ಅನ್ನೋದು ಮಾತ್ರ ಇಲ್ಲಿಯ ತನಕ ಅಷ್ಟಾಗಿ ಸದ್ದು ಮಾಡಿರಲಿಲ್ಲ.... ಆದ್ರೀವಾಗ ಮಂದಿರಕ್ಕೆ ಶ್ರೀ ರಾಮನೇ ಬಂದ ಮೇಲೆ ಇಲ್ಲೇ ಇದ್ದ ಅದು, ೧೯೭೦ರಲ್ಲೇ ಸ್ಥಾಪನೆ ಆಗಿದ್ದರೂ ಆಧ್ಯಾತ್ಮಿಕ ಕೊಂಡಿಯಾಗಿ ಇಡೀ ವಿಶ್ವಕ್ಕೆ ಬೆಸೆದಿದೆ. ಅದೇ ಸೀತಾರಾಮ ಆಧ್ಯಾತ್ಮಿಕ ಬ್ಯಾಂಕ್...!
 
ಅಯೋಧ್ಯೆಗೆ ಬರುವ ಭಕ್ತರಿಗೆ ಇಲ್ಲಿನ ಸೀತಾರಾಮ ಬ್ಯಾಂಕ್ ಮಾನಸಿಕವಾಗಿ ಆಧ್ಯಾತ್ಮಿಕ ನೆಮ್ಮದಿಯನ್ನು ನೀಡುತ್ತಿದೆ. ಸೀತಾರಾಮ ಬ್ಯಾಂಕ್ ಎಂಬ ಹೆಸರಿನಲ್ಲಿ ಸ್ಥಾಪನೆ ಆದ ಇದರಲ್ಲಿ ಹಣಕಾಸಿನ ವಹಿವಾಟು ನಡೆಯುತ್ತೆ ಅಂದ್ರೆ ಅದು ನಿಮ್ಮ ತಪ್ಪು ಕಲ್ಪನೆ...

ಹೌದು.... ಅಯೋಧ್ಯೆಯಲ್ಲಿನ ಈ ಸೀತಾರಾಮ ಬ್ಯಾಂಕಿನಲ್ಲಿ ಚೆಕ್ ಬುಕ್, ಹಣ ಡ್ರಾ, ಲಕ್ಷಾಂತರ ರೂಪಾಯಿ ಠೇವಣಿ, ಇದ್ಯಾವುದು ಕೂಡ ಇಲ್ಲ... ಹಾಗೆ ನೋಡಿದರೆ ಇದೊಂದು ಹಣಕಾಸಿನ ವಹಿವಾಟಿಗೆ ಸಂಬAಧಿಸಿದ ಬ್ಯಾಂಕೇ ಅಲ್ಲ... ಇದೇನಿದ್ದರೂ ಶ್ರೀ ರಾಮನ ಸೇವೆಗೆ, ಇವನ ಆರಾಧನೆಗೆ ಮೀಸಲಾಗಿರುವ ಭಕ್ತಿಕೇಂದ್ರ... ಇಲ್ಲಿ ಕೇಳೋದು ಬರೀ ಸೀತಾರಾಮ ನಾಮ ಮಾತ್ರ.....
 
ಇನ್ನೂ ಅಯೋಧ್ಯೆಯಲ್ಲಿ ಈ ಸೀತಾರಾಮ ಆಧ್ಯಾತ್ಮಿಕ ಬ್ಯಾಂಕಿನಲ್ಲಿ ಹೊಸದಾಗಿ ಅಕೌಂಟ್ ತೆರೆಯಬೇಕು ಅಂದ್ರೆ, ಏಕಾಏಕಿ ನಿರ್ಧಾರ ಮಾಡಿಕೊಂಡರೆ ಸಾಲದು.. ಇದಕ್ಕಂತಾ ಹಲವು ನೀತಿ ನಿಯಮಗಳು ಇವೆ. ಆ ಪ್ರಕಾರವಾಗಿ ಈ ಸೀತಾರಾಮ ಆಧ್ಯಾತ್ಮಿಕ ಬ್ಯಾಂಕಿನಲ್ಲಿ ಖಾತೆ ಒಪನ್ ಮಾಡಬೇಕಿದೆ...
 
ಸೀತಾರಾಮ ಬ್ಯಾಂಕಿನಲ್ಲಿ ಪ್ರತಿನಿತ್ಯ ಶ್ರೀ ರಾಮನ ಜಪ ಸದ್ದು ಮಾಡುತ್ತೆ... ಇದೊಂದು ಬರೀ ಆಧ್ಯಾತ್ಮಿಕ ಕೇಂದ್ರವಷ್ಟೇ. ಯಾವುದೇ ಹಣಕಾಸಿನ ವಹಿವಾಟು ಅಂತೂ ಈ ಸೀತಾರಾಮ ಬ್ಯಾಂಕಿನಲ್ಲಿ ನಡೆಯೋದಿಲ್ಲ. ಟೋಟಲಿ ಇದೊಂದು ಅಯೋಧ್ಯೆಗೆ ಬರುವ ಭಕ್ತರಿಗೆ ಮಾನಸಿಕವಾಗಿ ನೆಮ್ಮದಿಯನ್ನು ಸಿಗುವಂತೆ ಮಾಡುವ ಭಕ್ತಿ ಸೆಂಟರ್ ಅಷ್ಟೇ..ನೀವೆನಾದರೂ ಅಯೋಧ್ಯೆಯ ಕಡೆಗೆ ಹೋದ್ರೆ ಈ ಸೀತಾರಾಮ ಎಂಬ ಆಧ್ಯಾತ್ಮಿಕ ಬ್ಯಾಂಕಿನಲ್ಲಿ ಅಕೌಂಟ್ ಒಂದನ್ನ ತೆರೆದರೆ ಖಂಡಿತಾ ನಿಮಗೆ ಮಾನಸಿಕ ನೆಮ್ಮದಿ ಸಿಗುತ್ತೆ....
 
ಅರೇ ಹಾಗಾದರೆ ಈ ಸೀತಾರಾಮ್ ಬ್ಯಾಂಕಿನಲ್ಲಿ ಹೇಗಾಪ್ಪ ಅಕೌಂಟ್ ತೆರೆಯೋದು, ಇದಕ್ಕೇನಾದರೂ ಹಣ ಖರ್ಚಾಗುತ್ತಾ ಅದು ಇದು ಅಂತ ಯೋಚನೆ ಮಾಡಲೇಬೇಡಿ. ಯಾಕಂದ್ರೆ ನೀವೂ ಈ ಸೀತಾರಾಮ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಹಣ ಕೊಡಬೇಕಾಗಿಲ್ಲ. ಬದಲಾಗಿ ಸೀತಾರಾಮ್ ಸೀತಾರಾಮ್ ಅಂತ ಬರೋಬ್ಬರಿ ಐದು ಲಕ್ಷ ಬಾರಿ ಬರೆದರೆ ಸಾಕು ಈ ಬ್ಯಾಂಕಿಗೆ ನೀವೂ ಕೂಡ ಖಾತೆದಾರರು...?
 
ನೋಡಿದ್ರಾ ಎಲ್ಲರೂ ತಮ್ಮಗೆ ನೆಮ್ಮದಿ ಬೇಕು ಅಂತಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಲ್ಡೀವ್ಸ್, ನ್ಯೂಜಿಲೆಂಡ್, ಊಟಿ, ಪಾರ್ಟಿ ಅಂತ ತಿರುಗಾಡ್ತಾರೆ.. ಆದ್ರೆ ಈ ಸೀತಾರಾಮ ಬ್ಯಾಂಕಿನಲ್ಲಿ ಮನಿ ಇಲ್ಲದೇ ಬರೀ ಸೀತಾರಾಮ ಅಂತ ಬರೆದು, ಜಪಿಸಿದರೆ ಸಾಕು ಖಂಡಿತಾ ದುಪ್ಪಟ್ಟು ನೆಮ್ಮದಿ ಸೀಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.ರಾಮನ ಜನ್ಮಸ್ಥಳ ಅಯೊಧ್ಯೆಯಲ್ಲಿ ಎಲ್ಲವು ಬದಲಾಗಿ ಹೋಗ್ತಿದೆ.. ಶ್ರೀರಾಮನ ಮಂದಿರ ತಲೆಎತ್ತಿದ ಬಳಿಕವಂತೂ ಅತಿ ದೊಡ್ಡಧಾರ್ಮಿಕ ಪ್ರವಾಸೋದ್ಯಮ ಕೇಂದ್ರವಾಗಿ ರಾಮನೂರು ಶ್ರೀಮಂತ ವೈಭವವನ್ನು ನೋಡ್ತಿದೆ... ವಿದೇಶಗಳಿಂದಲೂ ಪ್ರವಾಸಿಗರು ಅಯೋಧ್ಯೆಯ ಕಡೆಗೆ ಹೆಜ್ಜೆ ಹಾಕ್ತಾ ಇದ್ದಾರೆ....
 
ನೋಡಿದ್ರಲ್ಲ ಶ್ರೀ ರಾಮನ ಆಗಮನ ಮತ್ತೆ ಅಯೋಧ್ಯೆಗೆ ಹೊಸ ಭರವಸೆ, ಶಕ್ತಿ, ಆಧ್ಯಾತ್ಮಿಕ ಸೆಳೆತವನ್ನು ತಂದುಕೊಟ್ಟಿದೆ ಅಂತ. ನಿಜಕ್ಕೂ ಈ ಎಲ್ಲ ಐತಿಹಾಸಿಕ ಕ್ಷಣಗಳಿಗೆ ಈ ಜನರೇಷನ್ ಸಾಕ್ಷಿ ಆಗ್ತಾ ಇದೆ ಅನ್ನೋದೆ ನಮ್ಮ ನಿಮ್ಮೆಲ್ಲರ ಪುಣ್ಯ.ಐದು ಲಕ್ಷ ಬಾರಿ ಸೀತಾರಾಮ್ ಅಂತ ಬರೆದ ದಿನವೇ ಅಯೋಧ್ಯೆಯ ಈ ಸೀತಾರಾಮ್ ಬ್ಯಾಂಕ್ ನಿಮ್ಮಗೆ ದುಪ್ಪಟ್ಟು ನೆಮ್ಮದಿಯನ್ನು ಕೊಟ್ಟೇ ಬಿಟ್ಟಿದೆ ಎಂದರ್ಥ... ಭಕ್ತಿಯೇ ಇಲ್ಲಿನ ಪ್ರಮುಖ ಶಕ್ತಿ ಅನ್ನೋದಷ್ಟೆ ಸಾರ್ವಕಾಲಿಕ ಸತ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ದರ ಏರಿಕೆ ಪರಿಹಾರ ಅಲ್ಲ-ಪಿ.ರವಿಕುಮಾರ್