Select Your Language

Notifications

webdunia
webdunia
webdunia
webdunia

ಇಂದಿನಿಂದ ಅಮರನಾಥ ಯಾತ್ರೆ ಶುರು

ಇಂದಿನಿಂದ ಅಮರನಾಥ ಯಾತ್ರೆ ಶುರು
ನವದೆಹಲಿ , ಶನಿವಾರ, 1 ಜುಲೈ 2023 (13:06 IST)
ಇಂದಿನಿಂದ(ಜುಲೈ.01) ಪ್ರಸಕ್ತ ಸಾಲಿನ ಬಹು ನಿರೀಕ್ಷಿತ ಅಮರನಾಥ ಯಾತ್ರೆಆರಂಭವಾಗಿದೆ. 3.880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇಗುಲಕ್ಕೆ ಸುಮಾರು 3,400 ಭಕ್ತರ ಮೊದಲ ಬ್ಯಾಚ್ ಶುಕ್ರವಾರ ದಕ್ಷಿಣ ಕಾಶ್ಮೀರದ ಭಗವತಿ ನಗರದ ಬೇಸ್ ಕ್ಯಾಂಪ್ನಿಂದ ಯಾತ್ರೆ ಆರಂಭಿಸಿದೆ.
 
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಯಾತ್ರೆಗೆ ಚಾಲನೆ ನೀಡಿದರು. ಕಳೆದ ವರ್ಷ ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದ 3,65,000 ಯಾತ್ರಾರ್ಥಿಗಳಿಗೆ ಹೋಲಿಸಿದರೆ ಈ ವರ್ಷ 3,00,000 ಕ್ಕೂ ಹೆಚ್ಚು ಭಕ್ತರು ಅಮರನಾಥ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ.

ಅಮರನಾಥ ಯಾತ್ರೆ ಜುಲೈ 1 ರಿಂದ ಪ್ರಾರಂಭವಾಗಿ ಆಗಸ್ಟ್ 31 ರಂದು ಕೊನೆಗೊಳ್ಳಲಿದೆ. 62 ದಿನಗಳ ಯಾತ್ರೆಯು ಸಮುದ್ರ ಮಟ್ಟದಿಂದ 13,500 ಅಡಿ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಭಗವಾನ್ ಶಿವನ ಗುಹಾ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಾಕ್ಷಿಯಾಗಿದೆ.

ಎರಡು ಮಾರ್ಗಗಳಲ್ಲಿ ಈ ಯಾತ್ರೆ ನಡೆಯಲಿದ್ದು ಅನಂತ್ನಾಗ್ ಜಿಲ್ಲೆಯ ನನ್ವಾನ್-ಪಹಲ್ಗಾಮ್ 48 ಕಿ.ಮೀ. ಮಾರ್ಗ ಹಾಗೂ ಗಂಡೆರ್ಬಾಲ್ ಜಿಲ್ಲೆಯ ಬಲ್ತಾಳ್ನ 14 ಕಿ.ಮೀ. ಮಾರ್ಗವಾಗಿ ಯಾತ್ರೆ ನಡೆಯಲಿದೆ. ಐಟಿಬಿಪಿ ಯೋಧರು ಯಾತ್ರೆಯ ಸಂಪೂರ್ಣ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಹೆದ್ದಾರಿಯಲ್ಲಿ ಭಾರತೀಯ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಉಧಂಪುರದಲ್ಲಿ ಭದ್ರತಾ ಕರ್ತವ್ಯದಲ್ಲಿ ನಿರತವಾಗಿದ್ದ ವಾಹನ ಅಪಘಾತಕ್ಕೀಡಾದಿ ಮೂವರು ಗಾಯಗೊಂಡಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಸರ್ಕಾರವು ಆಹಾರ, ವಸತಿ, ವಿದ್ಯುತ್, ನೀರು, ಭದ್ರತೆ ಮತ್ತು ತ್ಯಾಜ್ಯ ನಿರ್ವಹಣೆಗೆ ಸರಿಯಾದ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಅನೇಕ ಇಲಾಖೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಬಸ್ ಅಪಘಾತ : ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ