Select Your Language

Notifications

webdunia
webdunia
webdunia
webdunia

ಜಯವಾಹಿನಿ ಯಾತ್ರೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ..!

ಜಯವಾಹಿನಿ ಯಾತ್ರೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ..!
bangalore , ಭಾನುವಾರ, 23 ಏಪ್ರಿಲ್ 2023 (19:41 IST)
ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಶುರುವಾಗುತ್ತಲೇ ರಾಜಕೀಯ ನಾಯಕರ ಅಬ್ಬರದ ಪ್ರಚಾರ ಹೆಚ್ಚಾಗ್ತಿದೆ. ಮತ್ತೆ ಅಧಿಕಾರಕ್ಕೆ ಬರಬೇಕಂತ ಕೇಸರಿ ಪಡೆಯ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಅಭ್ಯರ್ಥಿಗಳ ಪ್ರಚಾರಕ್ಕೆ ಸಿಎಂ ಬೊಮ್ಮಾಯಿ ಅಖಾಡಕ್ಕಿಳಿದಿದ್ದು ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳನ್ನ ಆರಂಭಿಸಿದ್ದಾರೆ. ಇವತ್ತು ಬಸವೇಶ್ವರ ಬಸವೇಶ್ವರ ಜಯಂತಿ ಹಿನ್ನೆಲೆ ಚಾಲುಕ್ಯ ಸರ್ಕಲ್ ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಿಎಂ ಅಲ್ಲಿಂದ ಯಲಹಂಕದಲ್ಲಿ ರೋಡ್ ಶೋಗೆ ಚಾಲನೆ ನೀಡಿದ್ರು ಹಾಗಾದ್ರೆ ಈ ರೋಡ್ ನಲ್ಲಿ ಯಾರೆಲ್ಲಾ ನಾಯಕರು ಭಾಗಿಯಾಗಿದ್ರು ವಿಪಕ್ಷಗಳ ವಿರುದ್ದ ಸಿಎಂ ಯಾವ ರೀತಿ ಗುಡುಗಿದ್ರು .

ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕ  ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕಂತ ಹೈಕಮಾಂಡ್ ನಾಯಕರು ಶಪಥ ಮಾಡಿದ್ದಾರೆ. ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಎರಡು ದಿನಗಳ ರಾಜ್ಯಪ್ರವಾಸಕ್ಕೆ ಆಗಮಿಸಿದ್ದಾಗ ಚುನಾವಣೆ ಪ್ರಚಾರ ಸೇರಿದಂತೆ ಮಹತ್ವದ ವಿಚಾರಗಳನ್ನ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿದ್ರು.ಅದರ ಸೂಚನೆಯಂತೆ ಸಿಎಂ ಬೊಮ್ಮಾಯಿ ರೋಡ್ ಶೋಗಳನ್ನ ನಾಲ್ಕು ಹಂತದಲ್ಲಿ ಶುರುಮಾಡೊದಕ್ಕೆ ಶುರುಮಾಡಿದ್ದಾರೆ. ಯಲಹಂಕ ಪ್ರಾರಂಬವಾದ ರೋಡ್ ಶೋ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ‌ಗ್ರಾಮಾಂತರ, ತುಮಕೂರು ನಗರ, ಗುಬ್ಬಿ ,ತಿಪಟೂರು, ಅರಸೀಕೆರೆ, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ  ಮೊದಲ ದಿನವೇ 260 ಕಿಲೋ ಮೀಟರ್ ಯಾತ್ರೆ ಮಾಡಿರುವ ಸಿಎಂ 5 ಜಿಲ್ಲೆ 11 ಕಡೆ 9 ವಿಧಾನಸಭೆ ಕ್ಷೇತ್ರದಲ್ಲಿ ರೋಡ್ ಶೋ ನಲ್ಲಿ ಭಾಗಿಯಾಗಿದ್ರು.

ಇನ್ನು ಯಲಹಂಕದ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ಪರ ಪ್ರಚಾರ ಮಾಡಿದ ಸಿಎಂ ಬೊಮ್ಮಾಯಿ ಯಲಹಂಕದಲ್ಲಿ ಬೃಹತ್ ರೋಡ್ ಶೋ ಮಾಡಿ ವಿಶ್ವನಾಥ್ ಅವರ ಗೆಲ್ಲಿಸೋದಕ್ಕೆ ಕಾರ್ಯಕರ್ತರಿಗೆ ಕರೆ ನೀಡಿದ್ರು. ಯಲಹಂಕದಿಂದ ಕೋಗಿಲು ಕ್ರಾಸ್ ನಿಂದ ಸಿಎಂ ರೋಡ್ ಆರಂಭವಾದ ರೋಡ್ ಶೋ ರಾಜನಕುಂಟೆಯವರಿಗೂ ಜಯವಾಹಿನಿ ಯಾತ್ರೆ ನಡೆಯಿತು. ತೆರೆದ ವಾಹನದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ ಮಾಡಿದ ಸಿಎಂ ಗೆ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಡಾ ಸುದಾಕರ್ , ಗಾಯಕ ಚಂದನ್ ಶೆಟ್ಟಿ ಸಾಥ್ ನೀಡಿದ್ರು. 

ಇನ್ನೂ ಯಲಹಂಕ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ಪರ ಮಾತನಾಡಿದ ಸಿಎಂ ವಿಶ್ವನಾಥ್ ಈ ಕ್ಷೇತ್ರದ ಜನರ ಹೃದಯ ಗೆದ್ದಿದ್ದಾರೆ.ನನ್ನ ಆತ್ಮೀಯ ಮಿತ್ರ ಅವರು ಇವತ್ತಿಂದ ಯಲಹಂಕದಿಂದ ಪ್ರಚಾರ ಶುಭಾರಂಭ ಮಾಡಿದೀವಿ ಇದು ನಂಬರ್ ಒನ್ ಕ್ಷೇತ್ರ. 1 ಲಕ್ಷ ಮತಗಳಿಂದ ವಿಶ್ವನಾಥ್ ಗೆಲ್ಲಿಸಬೇಕಂತ ಕಾರ್ಯಕರ್ತರಿಗೆ ಕರೆ ನೀಡಿದ್ರು ಸಿಎಂ.. ಎಂದಿನಂತೆ ವಿಪಕ್ಷಗಳ ವಿರುದ್ದ ಸಿಎಂ ಕಿಡಿ ಕಾರಿದ್ರು.ಈ ಅನಿಷ್ಟ ಕಾಂಗ್ರೆಸ್ ತೊಲಿಗಿಸಬೇಕು.ಕಾಂಗ್ರೆಸ್ ಅಂದ್ರೆ ಭ್ರಷ್ಟಚಾರ, ಅನ್ಯಾಯ, ಅಧರ್ಮ ಈ ಪಕ್ಷವನ್ನ ಶಾಶ್ವತವಾಗಿ ಅಳಿಸಿ ಹಾಕಬೇಕು. ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಚಾರವಾಗಿದೆ‌ ಅಂತಾ ಕಾಂಗ್ರೆಸ್ ವಿರುದ್ದ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ರು .

ಒಟ್ನಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಜಯವಾಹಿನಿ‌ಯಾತ್ರೆಗೆ ಇಂದಿನಿಂದ ಚಾಲನೆ ನೀಡಿದ್ದು, ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದಾರೆ ಸಿಎಂ ಬೊಮ್ಮಾಯಿ.. ಅಭ್ಯರ್ಥಿಗಳ ಪರ ಮತಯಾಚನೆ, ವಿಪಕ್ಷಗಳ ಆರೋಪಕ್ಕೆ ತಿರುಗೇಟು ಸೇರಿದಂತೆ ಕಾರ್ಯಕರ್ತರನ್ನ ಒಗ್ಗೂಡಿಸೋದಕ್ಕೆ ರೋಡ್ ಶೋ ಈ ಬಾರಿ ಪ್ರಬಲ ಅಸ್ತ್ರವಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಕಾಲ್ನಡಿಗೆ ಜಾಥ ಹಾಗೂ ಬೀದಿ ನಾಟಕ ಕಾರ್ಯಕ್ರಮ