Select Your Language

Notifications

webdunia
webdunia
webdunia
webdunia

ಕನ್ವರ್ ಯಾತ್ರೆಯ ಮಾರ್ಗಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ: ಯೋಗಿ ಆದಿತ್ಯನಾಥ್

ಕನ್ವರ್ ಯಾತ್ರೆಯ ಮಾರ್ಗಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ: ಯೋಗಿ ಆದಿತ್ಯನಾಥ್
ಲಕ್ನೋ , ಗುರುವಾರ, 29 ಜೂನ್ 2023 (09:02 IST)
ಲಕ್ನೋ : ಕನ್ವರ್ ಯಾತ್ರೆಯ ಮಾರ್ಗಗಳಲ್ಲಿ ಮುಕ್ತವಾಗಿ ಮಾಂಸ ಮಾರಾಟವನ್ನು ರದ್ದು ಮಾಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆಗಳನ್ನು ನೀಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ಹಬ್ಬದ ಸೀಸನ್ಗೆ ಮುನ್ನ ಪೊಲೀಸ್ ಕಮಿಷನರ್, ವಿಭಾಗೀಯ ಕಮಿಷನರ್, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಈ ಸಂಬಂಧ ನಿರ್ದೇಶನಗಳನ್ನು ನೀಡಿದ್ದಾರೆ. 

ಈ ಬಾರಿ ಅಧಿಕ ಶ್ರಾವಣ ಇರುವ ಕಾರಣಕ್ಕೆ 8 ಸೋಮವಾರಗಳು ಬರಲಿವೆ. ಶಿವಭಕ್ತರಿಗೆ ಶ್ರಾವಣ ಮಾಸ ಬಹಳ ಮುಖ್ಯ. ಈ ಅವಧಿಯಲ್ಲಿ ಶ್ರಾವಣಿ ಶಿವರಾತ್ರಿ, ನಾಗಪಂಚಮಿ, ರಕ್ಷಾಬಂಧನ ಹಬ್ಬಗಳನ್ನು ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಮುಕ್ತವಾಗಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದಿದ್ದಾರೆ.

ಪವಿತ್ರ ಮಾಸ ಶ್ರಾವಣದಲ್ಲಿ ಜುಲೈ 4ರಿಂದ ಸಾಂಪ್ರದಾಯಿಕ ಕನ್ವರ್ ಯಾತ್ರೆ ಆರಂಭವಾಗಲಿದ್ದು, ಇದಕ್ಕೂ ಮುನ್ನ ಜೂನ್ 29ರಂದು ಬಕ್ರಿದ್ ಆಚರಣೆಯಾಗಲಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಬಾರಿ ಸೂಕ್ಷ್ಮವಾಗಿರುವುದು ಸ್ಪಷ್ಟ. ನಾವು ನಿರಂತರವಾಗಿ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರಿಗೆ ಶಾಕ್ ! ದುಬಾರಿಯಾದ ಟೊಮೆಟೋ ದರ