Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳ ದೂರು ನೀಡಿದ್ದಕ್ಕೆ ಸಹೋದರಿಯರ ವಿರುದ್ಧ ಗ್ರಾಮಸ್ಥರ ಕಾಟ

ಬೆದರಿಕೆ
ಚೆನ್ನೈ: 17 ವರ್ಷದ ಅಪ್ರಾಪ್ತ ಯುವತಿಗೆ ಆಕೆಯ ಸಂಬಂಧಿಕರೇ ಲೈಂಗಿಕ ಕಿರುಕುಳ ನೀಡಿದ್ದನ್ನು ಪೊಲೀಸರಿಗೆ ದೂರು ನೀಡಿದ್ದಕ್ಕೆ ಆಕೆಯ ಸಹೋದರಿಗೂ ಗ್ರಾಮಸ್ಥರೇ ಕಾಟ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಇಬ್ಬರು ಸಹೋದರಿಯರು ವಿಡಿಯೋ ಮೂಲಕ ತಮಿಳುನಾಡು ಮುಖ್ಯಮಂತ್ರಿಗೆ ರಕ್ಷಣೆ ಕೋರಿದ್ದಾರೆ. ಸಂಬಂಧಿ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಹೋದರಿಯರು ಪೊಲೀಸರಿಗೆ ದೂರು ನೀಡಿದ್ದರು.

ಇದಾದ ಬಳಿಕ ಗ್ರಾಮಸ್ಥರು ದೂರು ವಾಪಸ್ ಮಾಡುವಂತೆ ಮನೆಯಿಂದ ಹೊರಗೆ ಬಂದರೆ ಕಿರುಕುಳ ನೀಡುತ್ತಿದ್ದಾರೆ. ಒಂದು ವೇಳೆ ದೂರು ವಾಪಸ್ ಪಡೆಯದಿದ್ದರೆ ಜೀವಂತ ದಹನ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಹೋದರಿಯರು ವಿಡಿಯೋ ಮೂಲಕ ಮೊರೆಯಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಿತ ಯುವತಿಗೆ ಮತ್ತಿನ ಔಷಧ ನೀಡಿ ಬಲಾತ್ಕಾರ