Select Your Language

Notifications

webdunia
webdunia
webdunia
webdunia

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದ್ದರೆ ವಿಡಿಯೋ ಮಾಡಿದ ಜನ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದ್ದರೆ ವಿಡಿಯೋ ಮಾಡಿದ ಜನ
ಮಧ್ಯಪ್ರದೇಶ , ಸೋಮವಾರ, 14 ಮಾರ್ಚ್ 2022 (11:26 IST)
ಮಧ್ಯಪ್ರದೇಶ: ಜಾತ್ರೆಯೊಂದರಲ್ಲಿ ಅಪ್ರಾಪ್ತ ಯುವತಿ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದ್ದರೆ ಸುತ್ತಲಿದ್ದವರು ವಿಡಿಯೋ ಮಾಡುತ್ತಾ ನಿಂತಿದ್ದ ಹೀನ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಬುಡಕಟ್ಟು ಜನಾಂಗದವರ ಜಾತ್ರೆಯೊಂದರಲ್ಲಿ ಕೆಲವು ಯುವಕರ ಗುಂಪು ಅಪ್ರಾಪ್ತ ಯುವತಿಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ತಬ್ಬಿಕೊಂಡು ಮೃಗೀಯವಾಗಿ ನಡೆದುಕೊಳ್ಳುತ್ತಾರೆ.

ವಿಪರ್ಯಾಸವೆಂದರೆ ಸುತ್ತ ಜನರಿದ್ದರೂ ಅವರೆಲ್ಲರೂ ಘಟನೆಯನ್ನು ನೋಡುತ್ತಾ, ವಿಡಿಯೋ ಮಾಡುತ್ತಾ ನಿಂತಿದ್ದರಷ್ಟೇ ಹೊರತು ಯಾರೂ ಸಹಾಯಕ್ಕೆ ಬರಲಿಲ್ಲ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಪಾನ್ ನಲ್ಲಿ ಈ ರೀತಿಯ ಹೇರ್‌ಸ್ಟೈಲ್ ಬ್ಯಾನ್!