ನವದೆಹಲಿ : ಬಿಜೆಪಿ ಪಕ್ಷವನ್ನು ಸೇರಿದರೇ ತಮ್ಮ ಮೇಲಿನ ಇಡಿ, ಸಿಬಿಐ ಪ್ರಕರಣಗಳಿಂದ ಮುಕ್ತಗೊಳಿಸುವ ಆಫರ್ ನೀಡಲಾಗಿದೆ ಎಂದು ದೆಹಲಿಯ ಡಿಸಿಎಂ, ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಆರೋಪ ಮಾಡಿದ್ದಾರೆ.
ಹೊಸ ಮದ್ಯನೀತಿಗೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ಬೆನ್ನಲೆ ಆಮ್ ಅದ್ಮಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇಂದು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಸಂದೇಶ ನನಗೆ ಬಂದಿದೆ. “ಎಎಪಿ” ಬಿಟ್ಟು ಬಿಜೆಪಿಗೆ ಸೇರಿಕೊಳ್ಳಿ, ಎಲ್ಲಾ ಸಿಬಿಐ ಇಡಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತೇವೆ.
ಬಿಜೆಪಿಗೆ ನನ್ನ ಉತ್ತರ – ನಾನು ರಜಪೂತ, ಮಹಾರಾಣಾ ಪ್ರತಾಪ್ ವಂಶಸ್ಥ. ನನ್ನ ತಲೆಯನ್ನು ಕತ್ತರಿಸುತ್ತೇನೆ. ಆದರೆ ಭ್ರಷ್ಟ-ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ಮೇಲಿರುವ ಕೇಸುಗಳೆಲ್ಲಾ ಸುಳ್ಳು, ಏನು ಬೇಕಾದರೂ ಮಾಡಿ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ತಿಳಿದ್ದಾರೆ.