Select Your Language

Notifications

webdunia
webdunia
webdunia
webdunia

ಡ್ರಗ್ಸ್‌ ಸಾಗಿಸುತ್ತಿದ್ದ ಹಡಗು ಗುಜರಾತ್‌ನಲ್ಲಿ ವಶ

ಡ್ರಗ್ಸ್‌ ಸಾಗಿಸುತ್ತಿದ್ದ ಹಡಗು ಗುಜರಾತ್‌ನಲ್ಲಿ ವಶ
ಗಾಂಧೀನಗರ , ಬುಧವಾರ, 14 ಸೆಪ್ಟಂಬರ್ 2022 (12:58 IST)
ಗಾಂಧೀನಗರ : ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿ 200 ಕೋಟಿ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಹಡಗನ್ನು ಗುಜರಾತ್ನಲ್ಲಿ  ವಶಪಡಿಸಿಕೊಳ್ಳಲಾಗಿದೆ.
 
ಹಡಗು ಅಕ್ರಮವಾಗಿ ಭಾರತದ ಜಲ ಗಡಿ ಪ್ರವೇಶಿಸಿತ್ತು. ಹಡಗಿನಲ್ಲಿ 200 ಕೋಟಿ ಮೌಲ್ಯದ 40 ಕೆಜಿ ಮಾದಕ ವಸ್ತುಗಳು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಹಡಗು 6 ಮೈಲುಗಳಷ್ಟು ಭಾರತೀಯ ಸಮುದ್ರ ಗಡಿಯೊಳಗೆ ಬಂದಿತ್ತು. ಈ ವೇಳೆ ಪಾಕಿಸ್ತಾನದ ಕೆಲವು ಪ್ರಜೆಗಳ ಬಂಧಿಸಲಾಗಿದೆ.

ಕರಾವಳಿ ಕಾವಲು ಪಡೆ ಮತ್ತು ರಾಜ್ಯ ಎಟಿಎಸ್ ಈ ಹಿಂದೆ ಗುಜರಾತ್ ಕರಾವಳಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಅಕ್ಟೋಬರ್ 2021 ರಲ್ಲಿ ಗುಜರಾತ್ನ ಮುಂದ್ರಾ ಬಂದರಿನಿಂದ 2,988 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ವಾಟ್ಸಪ್ ನಲ್ಲಿ ಹೊಸ ಫೀಚರ್