Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಡ್ರೋಣ್‌ ಮೂಲಕ ಡ್ರಗ್ಸ್‌ ಭಾರತಕ್ಕೆ ರವಾನೆ!

BSF Drone‌ Heroin Pakistan ಪಾಕಿಸ್ತಾನ ಬಿಎಸ್‌ ಎಫ್‌ ಡ್ರೋಣ್‌ ಹೆರಾಯಿನ್
bengaluru , ಸೋಮವಾರ, 9 ಮೇ 2022 (16:46 IST)
ಪಾಕಿಸ್ತಾನದಿಂದ ಹೆರಾಯಿನ್ ಹೊತ್ತು ಬರುತ್ತಿದ್ದ ಡ್ರೋಣ್‌ ಅನ್ನು ಗಡಿ ಭದ್ರತಾ ಪಡೆ (BSF) ಹೊಡೆದುರಳಿಸಿದ ಘಟನೆ ಪಂಜಾಬ್‌ ನ ಅಮೃತಸರದ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.
ಡ್ರೋಣ್ ಮೂಲಕ ಮಾದಕವಸ್ತುಗಳನ್ನು ಕಳ್ಳಸಾಗಾಣೆ ಮಾಡುವ ಪಾಕಿಸ್ತಾನದ ಯತ್ನವನ್ನು ಗಡಿ ಭದ್ರತಾ ಪಡೆ ವಿಫಲಗೊಳಿಸಿದೆ.‌
ಪಾಕ್ ಕಡೆಯಿಂದ ಬರುತ್ತಿದ್ದ ಡ್ರೋಣ್ ಗಮನಿಸಿದ ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ‌ಡ್ರೋಣ್‌ ನಲ್ಲಿ ಸುಮಾರು 10.670 ಕೆಜಿ ಹೆರಾಯಿನ್ ಇದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಟ್ವೀಟರ್‌ ನಲ್ಲಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ