Publish Date: Fri, 26 Oct 2018 (13:45 IST)
Updated Date: Fri, 26 Oct 2018 (13:48 IST)
ಮಿಚಿಗನ್ : 18 ವರ್ಷದ ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಕಾರಣ ಮಿಚಿಗನ್ ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ತರಬೇತುದಾರ ಹಾಗೂ ವಿದ್ಯಾರ್ಥಿನಿಯನ್ನು ಸಾರ್ವಜನಿಕವಾಗಿ ಅಸಭ್ಯ ಮತ್ತು ಅಶ್ಲೀಲ ಕ್ರಿಯೆಯಲ್ಲಿ ತೊಡಗಿದ್ದ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
39 ವರ್ಷದ ಸ್ಕೋಟ್ ವೆಟ್ಟರೆ ಬಂಧಿತ ಆರೋಪಿಯಾಗಿದ್ದು, ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಮಿಚಿಗನ್ ಅತ್ಯುತ್ತಮ ಕ್ರೀಡಾಪಟು ಆಗಿರುವ ಈತ 2017 ರಲ್ಲಿ ಮಹಿಳೆಯರ ಜಿಮ್ನಾಸ್ಟಿಕ್ ತಂಡಕ್ಕೆ ಸಹಾಯಕ ತರಬೇತುದಾರನಾಗಿ ನೇಮಕಗೊಂಡಿದ್ದ. ಅಲ್ಲದೇ ಈತ 1999 ರಲ್ಲಿ ವಿಶ್ವವಿದ್ಯಾಲಯ ಬೆಸ್ಟ್ ಆಥ್ಲಿಟ್ ಆಗಿ ಹೊರಹೊಮ್ಮಿದ್ದ.
ಇದೀಗ ವಿದ್ಯಾರ್ಥಿನಿಯೊಂದಿಗೆ ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಕಾರಣ ಮಿಚಿಗನ್ ವಿಶ್ವವಿದ್ಯಾಲಯದ ಕ್ರೀಡಾಪಟು ನಿಯಮದ ಅನುಸಾರ ಆತನನ್ನು ಹುದ್ದೆಯಿಂದ ಅಮಾನತು ಮಾಡಿದ್ದಾರೆ. ಹಾಗೇ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.