Publish Date: Thu, 30 Aug 2018 (11:40 IST)
Updated Date: Thu, 30 Aug 2018 (11:44 IST)
ಬೆಂಗಳೂರು: ದೆಹಲಿ ಮೂಲದ ಮಹಿಳಾ ಟೆಕ್ಕಿ ವಿಜಯಲಕ್ಷ್ಮಿ (23) ಅವರನ್ನು ಕೊಲೆ ಮಾಡಿ ಪರಾರಿ ಆಗಿದ್ದ ಹರೀಶ್ ಅನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ದೆಹಲಿ ಮೂಲದವರೇ ಆಗಿದ್ದ ವಿಜಯಲಕ್ಷ್ಮಿ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.ದೆಹಲಿಯಲ್ಲೆ ಪರಿಚಯವಾಗಿದ್ದ ಗೆಳೆಯ ಹರೀಶ್‌ಕುಮಾರ್ ಆ. 15 ರಂದು ಗೆಳತಿಯನ್ನು ಮಾತಾಡಿಸುವ ನೆಪದಲ್ಲಿ ಬೆಂಗಳೂರಿಗೆ ಬಂದು ಕೊಲೆ ಮಾಡಿ ಪರಾರಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಲಕ್ಷ್ಮಿ ದೆಹಲಿಯಲ್ಲಿದ್ದಾಗಲೇ ಜಿಮ್ ತರಬೇತುದಾರನಾಗಿದ್ದ ಹರೀಶ್‌ನ ಪರಿಚಯ ಆಗಿತ್ತು. ಅವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಹರೀಶ್ ಆ ಸ್ನೇಹವನ್ನು ಪ್ರೀತಿ ಎಂದು ನಂಬಿಕೊಂಡಿದ್ದ. ಹೀಗಾಗಿ ಮದುವೆಯಾಗು ಎಂದು ಆಕೆಯನ್ನು ಪೀಡಿಸುತ್ತಿದ್ದ. ವಿಜಯಲಕ್ಷ್ಮಿ ದೆಹಲಿಯಿಂದ ಬೆಂಗಳೂರಿಗೆ ವರ್ಗವಾಗಿದ್ದು ಹರೀಶ್‌ಗೆ ಇಷ್ಟ ಇರಲಿಲ್ಲ. ತನ್ನನ್ನು ವಿಜಯಲಕ್ಷ್ಮಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಸಿಟ್ಟುಗೊಂಡಿದ್ದ. ಅದು ಅಲ್ಲದೇ ವಿಜಯಲಕ್ಷ್ಮಿಯಿಂದ ಅಗತ್ಯಬಿದ್ದಾಗಲೆಲ್ಲಾ ಸಾಕಷ್ಟು ಹಣ ಪೀಕುತ್ತಿದ್ದ ಹರೀಶ್‌ಗೆ ಈ ಹಣದ ಮೂಲ ಕೂಡ ನಿಂತು ಹೋಗುತ್ತದೆ ಎನ್ನುವ ಭಯ ಕಾಡತೊಡಗಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ವೈಟ್‌ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.
ಆ.16 ರಂದು ಬೆಂಗಳೂರಿನ ನಾಗೊಂಡನಹಳ್ಳಿಯ ಬಾಡಿಗೆ ಮನೆಯಲ್ಲಿ ಕೊಲೆ ಮಾಡಿ ಆರೋಪಿ ದಿಲ್ಲಿಯಲ್ಲಿ ತಲೆಮರೆಸಿಕೊಂಡಿದ್ದ. ಆ. 15 ರಂದು ಗೆಳತಿಯನ್ನು ಮಾತಾಡಿಸುವ ನೆಪದಲ್ಲಿ ಬೆಂಗಳೂರಿಗೆ ಬಂದು ಕೊಲೆ ಮಾಡಿ ಪರಾರಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.