ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಮಾಡುವವರಿಗೆ ಜಿಲ್ಲಾಧಿಕಾರಿಗಳಿಂದ ಖಡಕ್ ಎಚ್ಚರಿಕೆ

ಗುರುವಾರ, 30 ಆಗಸ್ಟ್ 2018 (11:12 IST)
ಚಿಕ್ಕಬಳ್ಳಾಪುರ : ಮುಂದೆ ಬರುವ ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಮಾಡುವವರಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಎಚ್ಚರಿಕೆಯೊಂದನ್ನು  ನೀಡಿದ್ದಾರೆ.


ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿರುದ್ಧ್ ಶ್ರವಣ್ , ಗಣೇಶ ಹಬ್ಬದಲ್ಲಿ, ಪಟಾಕಿ ಸಿಡಿಸಿ, ಡಿಜೆ ಸೌಂಡ್ ಸಿಸ್ಟಮ್ ಗಳನ್ನ ಅಳವಡಿಸಿ ಪರಿಸರ ಮಾಲಿನ್ಯ ಮಾಡುವಂತೆ ಯಾವ ಶಾಸ್ತ್ರ ಸಂಪ್ರದಾಯದಲ್ಲೂ ಹೇಳಿಲ್ಲ. ಗಣೇಶ ಪ್ರತಿಷ್ಠಾಪನೆ ಹೆಸರಿನಲ್ಲಿ ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.


ಒಂದು ವೇಳೆ ಜನರೇ ಚಂದಾ ಕೊಡಲು ಇಷ್ಟ ಪಟ್ಟರೆ ವಿಶ್ವಾಸವಿರುವ ಸಂಘ ಸಂಸ್ಥೆಗಳಿಗೆ ಮಾತ್ರ ನಿಮ್ಮ ಹಣವನ್ನು ನೀಡಬಹುದು. ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಸಂಘ ಅಥವಾ ವ್ಯಕ್ತಿ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಬೇಕಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡೊನಾಲ್ಡ್‌ ಟ್ರಂಪ್‌ ಗೂಗಲ್‌ ವಿರುದ್ಧ ಮಾಡಿದ ಆರೋಪವೇನು?